ವಿಶ್ವಾಸಾರ್ಹ Street View ಫೋಟೋಗ್ರಾಫರ್ಗಳ ನೀತಿ
Google ಉತ್ಪನ್ನಗಳಲ್ಲಿ ಬಳಸಲು ತಮ್ಮ ಗ್ರಾಹಕರ ಪರವಾಗಿ ಇಮೇಜರಿಯನ್ನು ಸಂಗ್ರಹಿಸುವ ಎಲ್ಲಾ Street View ವಿಶ್ವಾಸಾರ್ಹ ಭಾಗೀದಾರರಿಗೆ ಈ ಕಾರ್ಯನೀತಿಯು ಅನ್ವಯಿಸುತ್ತದೆ.
ನಮ್ಮ ಗಲ್ಲಿ ವೀಕ್ಷಣೆ ವಿಶ್ವಾಸಾರ್ಹ ಫೋಟೋಗ್ರಾಫರ್ಗಳ ಕಾರ್ಯನೀತಿಯು ನಾಲ್ಕು ಅಂಶಗಳನ್ನು ಒಳಗೊಂಡಿದೆ:
- ಪಾರದರ್ಶಕತೆಯ ಅಗತ್ಯತೆಗಳು: ನಿಮ್ಮ ಗ್ರಾಹಕರ ಜೊತೆಗೆ ನೀವು ಹಂಚಿಕೊಳ್ಳಬೇಕಾದ ಮಾಹಿತಿ
- ನಿಷೇಧಿತ ಅಭ್ಯಾಸಗಳು: ನಿಮ್ಮ ಗ್ರಾಹಕರ ಪರವಾಗಿ Google ಉತ್ಪನ್ನಗಳಲ್ಲಿ ಅಪ್ಲೋಡ್ ಮಾಡಿದ ಚಿತ್ರಣವನ್ನು ಪ್ರಕಟಿಸಲು ಅಥವಾ ನಿರ್ವಹಿಸಲು ನೀವು ಬಯಸಿದರೆ, ನಿಮ್ಮಿಂದ ಮಾಡಲಾಗದ ವಿಷಯಗಳು
- ಬ್ರ್ಯಾಂಡಿಂಗ್ ಮಾರ್ಗಸೂಚಿಗಳು: Google ಬ್ರ್ಯಾಂಡಿಂಗ್ ಅಂಶಗಳ ಸೂಕ್ತ ಬಳಕೆ ಯಾವುದು
- ಗುಣಮಟ್ಟದ ಅಗತ್ಯತೆಗಳು: ನಿಮ್ಮ ಗ್ರಾಹಕರ Google ಜಾಹೀರಾತು ಖಾತೆಗಳನ್ನು ನೀವು ಹೇಗೆ ವ್ಯವಸ್ಥೆಗೊಳಿಸಬೇಕು
ಪಾರದರ್ಶಕತೆ ಅಗತ್ಯತೆಗಳು
ಗ್ರಾಹಕರು Google ಉತ್ಪನ್ನಗಳಲ್ಲಿ ಇಮೇಜರಿಯನ್ನು ಅಪ್ಲೋಡ್ ಮಾಡುವುದರ ಪ್ರಯೋಜನಗಳನ್ನು ಸಂಪೂರ್ಣವಾಗಿ ತಿಳಿದುಕೊಳ್ಳಲು, ಸೂಕ್ತ ನಿರ್ಧಾರಗಳನ್ನು ತೆಗೆದುಕೊಳ್ಳಲು ಅವರು ಸರಿಯಾದ ಮಾಹಿತಿಯನ್ನು ಹೊಂದಿರಬೇಕು. ಆದ್ದರಿಂದ, ನಮ್ಮ ಎಲ್ಲಾ ವಿಶ್ವಾಸಾರ್ಹ ಭಾಗೀದಾರರು ಈ ನಿರ್ಧಾರಗಳ ಮೇಲೆ ಪರಿಣಾಮ ಬೀರುವ ಮಾಹಿತಿಯ ವಿಷಯದಲ್ಲಿ ಪಾರದರ್ಶಕವಾಗಿರುವುದು ಅಗತ್ಯವಾಗಿದೆ. ಕೆಳಗೆ ವಿವರಿಸಿರುವ ಅಗತ್ಯತೆಗಳನ್ನು ಪೂರೈಸುವುದರ ಜೊತೆಗೆ, ಇತರ ಸಂಬಂಧಿತ ಮಾಹಿತಿಯನ್ನು ಒದಗಿಸಲು ಗ್ರಾಹಕರು ವಿನಂತಿಸಿದಾಗ ವಿಶ್ವಾಸಾರ್ಹ ಭಾಗೀದಾರರು ಸಮಂಜಸವಾದ ಪ್ರಯತ್ನಗಳನ್ನು ಮಾಡಬೇಕು.
ಇತರರಿಗೆ ಛಾಯಾಗ್ರಹಣ ಸೇವೆಯನ್ನು ಮಾರಾಟ ಮಾಡುವಾಗ, ನೀವು ಅದೇ ಪಾರದರ್ಶಕತೆಯನ್ನು ಮೈಗೂಡಿಸಿಕೊಂಡಿರಬೇಕು ಮತ್ತು ಮುಖ್ಯವಾಗಿ ಇತರ ಜನರು, ಬ್ರ್ಯಾಂಡ್ಗಳು ಹಾಗೂ ಸ್ಥಳೀಯ ಕಾನೂನುಗಳಿಗೆ ಅನುಸಾರವಾಗಿ ನಿಮ್ಮ ಕರ್ತವ್ಯಗಳು ಮತ್ತು ಹಕ್ಕುಗಳನ್ನು ಅರ್ಥಮಾಡಿಕೊಳ್ಳಬೇಕಾಗುತ್ತದೆ ಎಂಬುದನ್ನು ಮರೆಯಬೇಡಿ.
ಸೇವಾ ಶುಲ್ಕಗಳು ಮತ್ತು ದರಗಳು
ವಿಶ್ವಾಸಾರ್ಹ ಪ್ರೋಗ್ರಾಂನಲ್ಲಿ ಪಾಲ್ಗೊಳ್ಳುವವರು ತಾವು ಒದಗಿಸುವ ಅಮೂಲ್ಯ ಸೇವೆಗಳಿಗಾಗಿ ಹಲವುವೇಳೆ ನಿರ್ವಹಣಾ ಶುಲ್ಕವನ್ನು ವಿಧಿಸುತ್ತಾರೆ ಮತ್ತು ಈ ಶುಲ್ಕಗಳನ್ನು ತಮಗೆ ವಿಧಿಸಲಾಗುತ್ತದೆಯೇ ಎಂಬುದು ಇಮೇಜರಿಯ ಖರೀದಿದಾರರಿಗೆ ತಿಳಿದಿರಬೇಕು. ಕನಿಷ್ಠ ಪಕ್ಷ, ಪ್ರತಿ ಮೊದಲ ಮಾರಾಟಕ್ಕೆ ಮುಂಚಿತವಾಗಿ ಹೊಸ ಗ್ರಾಹಕರಿಗೆ ಲಿಖಿತ ರೂಪದಲ್ಲಿ ತಿಳಿಸಿ ಮತ್ತು ಗ್ರಾಹಕರ ಇನ್ವಾಯ್ಸ್ಗಳಲ್ಲಿ ನಿಮ್ಮ ಶುಲ್ಕಗಳು ಮತ್ತು ವೆಚ್ಚಗಳ ಅಸ್ತಿತ್ವವನ್ನು ಬಹಿರಂಗಪಡಿಸಿ.
ದೊಡ್ಡ ಪ್ರಮಾಣದ ಇಮೇಜರಿ ಖರೀದಿದಾರರ ಬಳಿ ಇರುವ ಸಂಪನ್ಮೂಲಗಳು ಅಥವಾ ತಜ್ಞರನ್ನು ಹೊಂದಿರದ ಸಣ್ಣ ಪ್ರಮಾಣದ ಬಜೆಟ್ಗಳನ್ನು ಹೊಂದಿರುವ ಇಮೇಜರಿ ಖರೀದಿದಾರರು, Street View ವಿಶ್ವಾಸಾರ್ಹ ಫೋಟೋಗ್ರಾಫರ್ ಜೊತೆಗೆ ಕೆಲಸ ಮಾಡುವಾಗ ಅವರು ಏನನ್ನು ನಿರೀಕ್ಷಿಸಬಹುದು ಎಂಬುದನ್ನು ತಿಳಿದುಕೊಳ್ಳುವುದು ಮುಖ್ಯವಾಗಿದೆ.
ಪ್ರಾಮಾಣಿಕ ಪ್ರತಿನಿಧಿತ್ವ
Street View ವಿಶ್ವಾಸಾರ್ಹ ಪ್ರೋಗ್ರಾಂನಲ್ಲಿ ಪಾಲ್ಗೊಳ್ಳುವವರಾಗಿ, ನೀವು Google ನ ಉದ್ಯೋಗಿಯಾಗಿದ್ದೀರಿ ಎನ್ನುವ ಭಾವನೆ ಬರುವಂತೆ ನಡೆದುಕೊಳ್ಳಬಾರದು. ನಿಮ್ಮದು ಒಂದು ಸಂಪೂರ್ಣ ಸ್ವತಂತ್ರ ವ್ಯಾಪಾರ ಘಟಕ ಎಂದು ಪ್ರಾಮಾಣಿಕವಾಗಿ ಪರಿಚಯಿಸಿಕೊಳ್ಳಿ. ಒಂದು ಪ್ರಕಟಣಾ ಸೇವೆಯಾಗಿ Google ಒಂದು ಸೀಮಿತ ಪಾತ್ರವನ್ನು ನಿರ್ವಹಿಸುತ್ತಿದೆ ಎಂದು ಕ್ಲೈಂಟ್ಗಳಿಗೆ ಮನವರಿಕೆ ಮಾಡಿಕೊಡಿ.
ವೈಯಕ್ತಿಕ ಜವಾಬ್ದಾರಿ
ಪ್ರಕಟಿಸಿದ ಚಿತ್ರಗಳು ಸಾಮಾನ್ಯವಾಗಿ ಕೆಲವು ಕ್ಷಣಗಳಲ್ಲೇ Google Maps ನಲ್ಲಿ ಕಾಣಿಸಿಕೊಂಡರೂ, ಅವುಗಳು Google Maps ಸೇವಾ ನಿಯಮಗಳು ಅಥವಾ Maps ಬಳಕೆದಾರ ಕೊಡುಗೆ ನೀಡಿದ ವಿಷಯ ನೀತಿಗಳನ್ನು ಅನುಸರಿಸದಿದ್ದಲ್ಲಿ, ನಂತರ ಅವುಗಳನ್ನು ತಿರಸ್ಕರಿಸಬಹುದಾಗಿದೆ.
- ನಿಯೋಜಿತ ಚಿತ್ರಣವನ್ನು Google Maps ತೆಗೆದುಹಾಕಿದರೆ, ಸಮಸ್ಯೆಯನ್ನು ಬಗೆಹರಿಸುವ ಜವಾಬ್ದಾರಿ ಫೋಟೋಗ್ರಾಫರ್ ಮತ್ತು ವ್ಯಾಪಾರದ ಮಾಲೀಕರ ಮೇಲಿರುತ್ತದೆ.
- ನಮ್ಮ ಕಾರ್ಯನೀತಿಗಳಿಗೆ ವಿರುದ್ಧವಾಗಿರುವ ಚಿತ್ರಗಳನ್ನು ಫೋಟೋಗ್ರಾಫರ್ಗಳು ತಕ್ಷಣ ಸರಿಪಡಿಸಬೇಕು ಅಥವಾ ಬದಲಿಸಬೇಕು - ಮತ್ತು ಅವು Google Maps ಗಾಗಿ ಅನುಮೋದಿತಗೊಂಡಿವೆ ಎಂಬುದನ್ನು ಖಚಿತಪಡಿಸಿಕೊಳ್ಳಬೇಕು - ಅಥವಾ ಸಮಸ್ಯೆಯನ್ನು ಬಗೆಹರಿಸುವುದು ಅಸಾಧ್ಯವಾದಲ್ಲಿ, ತಮ್ಮ ಕ್ಲೈಂಟ್ಗೆ ಪೂರ್ತಿ ಹಣವನ್ನು ಮರುಪಾವತಿ ಮಾಡಬೇಕೆಂದು ನಾವು ಶಿಫಾರಸು ಮಾಡುತ್ತೇವೆ.
ಚಿತ್ರದ ಮಾಲೀಕತ್ವ
ಫೋಟೋಗ್ರಾಫರ್ಗಳು ಮತ್ತು ವ್ಯಾಪಾರ ಮಾಲೀಕರು ಇಬ್ಬರೂ ಕಾರ್ಯನಿರತರಾಗುವ ಮೊದಲು, ಇಬ್ಬರೂ ಸೇರಿ ಒಪ್ಪಂದದ ನಿಯಮಗಳು, ವಾರೆಂಟಿ ಮತ್ತು ಭವಿಷ್ಯದ ಮಾಲೀಕತ್ವದ ಹಕ್ಕುಗಳನ್ನು ನಿರ್ದಿಷ್ಟಪಡಿಸುವ ಒಂದು ಲಿಖಿತ ಕರಾರನ್ನು ಮಾಡಿಕೊಳ್ಳಬೇಕೆಂದು ನಾವು ಶಿಫಾರಸು ಮಾಡುತ್ತೇವೆ.
- ಚಿತ್ರೀಕರಣ ಮುಗಿದ ನಂತರ, ಚಿತ್ರಣದ ಮಾಲೀಕತ್ವದ ಹಕ್ಕನ್ನು ಯಾರು ಪಡೆದುಕೊಳ್ಳುತ್ತಾರೆ ಎಂಬುದನ್ನು ನಿರ್ಧರಿಸಿ. ಒಂದು ವೇಳೆ ಫೋಟೋಗ್ರಾಫರ್ ಮಾಲೀಕತ್ವವನ್ನು ಉಳಿಸಿಕೊಳ್ಳುವುದಾದರೆ, ಫೋಟೋಗ್ರಾಫರ್ ಕೃತಿಸ್ವಾಮ್ಯವನ್ನು ಉಲ್ಲಂಘಿಸದೆ ವ್ಯಾಪಾರದ ಮಾಲೀಕರು ಚಿತ್ರಣವನ್ನು ಹೇಗೆ ಬಳಸಬಹುದು ಎನ್ನುವುದರ ಬಗ್ಗೆ ಅವರಿಗೆ ತಿಳಿದಿದೆಯೇ ಎಂಬುದನ್ನು ಖಚಿತಪಡಿಸಿಕೊಳ್ಳಿ. ಒಂದೇ ಚಿತ್ರವನ್ನು ಎರಡು ಖಾತೆಗಳ (ಉದಾಹರಣೆಗೆ, ಫೋಟೋಗ್ರಾಫರ್ ಮತ್ತು ವ್ಯಾಪಾರ ಮಾಲೀಕರ ಖಾತೆಗಳು) ಅಡಿಯಲ್ಲಿ ಎರಡು ಬಾರಿ ಪ್ರಕಟಿಸಬಾರದು.
ಕಾನೂನು ಅನುಸರಣೆ
ಕ್ಲೈಂಟ್ಗಳಿಗೆ ಸೇವೆ ಒದಗಿಸುವಾಗ ಅನ್ವಯವಾಗುವ ಎಲ್ಲಾ ಕಾನೂನನ್ನು ತಪ್ಪದೆ ಪಾಲಿಸಿ. ನಿಮ್ಮ ನೈಪುಣ್ಯ ಅಥವಾ ನೀವು ಮಾಡುವ ಕೆಲಸದ ಅಂತಿಮ ಗುಣಮಟ್ಟವನ್ನು ತಪ್ಪಾಗಿ ಪ್ರತಿನಿಧಿಸಬೇಡಿ. ಜೊತೆಗೆ, ನಿಮಗೆ ನಿಯೋಜಿಸಿರುವ ಕೆಲಸವನ್ನು ಪೂರ್ತಿಗೊಳಿಸಲು ಅಗತ್ಯವಿರುವ ಸೂಕ್ತ ವಿಮೆಯನ್ನು ಜೊತೆಗೆ ಕೊಂಡೊಯ್ಯುವುದನ್ನು ಮರೆಯಬೇಡಿ.
ಚಿತ್ರದ ಗೋಚರತೆ
ವ್ಯಾಪಾರ ಮಾಲೀಕರು ಮತ್ತು ಫೋಟೋಗ್ರಾಫರ್ಗಳ ನಡುವಿನ ಒಪ್ಪಂದಗಳನ್ನು ಒಳಗೊಂಡಂತೆ ಮೂರನೇ ವ್ಯಕ್ತಿಗಳ ನಡುವಿನ ಯಾವುದೇ ಗುತ್ತಿಗೆ ಅಥವಾ ವಾಣಿಜ್ಯ ಒಪ್ಪಂದವನ್ನು ಲೆಕ್ಕಿಸದೆಯೇ Google Maps ನಲ್ಲಿರುವ ಚಿತ್ರಗಳಿಗೆ Google ರ್ಯಾಂಕ್ ನೀಡುತ್ತದೆ. ವ್ಯಾಪಾರ ಮಾಲೀಕರು ಫೋಟೋ ಶೂಟ್ಗಾಗಿ ವೃತ್ತಿನಿರತ ಫೋಟೋಗ್ರಾಫರ್ ಅವರಿಗೆ ಮಾಡಿದ ಹಣ ಪಾವತಿಯು, Google Maps ನಲ್ಲಿಇಮೇಜರಿಗೆ ಯಾವ ಸ್ಥಾನ ನೀಡಲಾಗಿದೆ ಅಥವಾ ಅದು ಹೇಗೆ ಗೋಚರಿಸುತ್ತದೆ ಎಂಬುದರ ಮೇಲೆ ಪ್ರಭಾವ ಬೀರುವುದಿಲ್ಲ.
ಹಿತಾಸಕ್ತಿಗಳ ಸಂಘರ್ಷವಿರಬಾರದು
ಕೆಲವು Google ಪ್ರೋಗ್ರಾಂಗಳು - ಗಮನಾರ್ಹವಾಗಿ ಸ್ಥಳೀಯ ಮಾರ್ಗದರ್ಶಕರು ಪ್ರೋಗ್ರಾಂ - ನೀವು ಹವ್ಯಾಸಿಗಳಾಗಿ (ಉದಾಹರಣೆಗೆ, ನೀವು ಕೊಡುಗೆ ನೀಡುವ ವಿಷಯಕ್ಕಾಗಿ ನಿಮಗೆ ಯಾವುದೇ ರೀತಿಯ ಪರಿಹಾರವನ್ನು ನೀಡಲಾಗುವುದಿಲ್ಲ) ಭಾಗವಹಿಸುವುದನ್ನು ಬಯಸುತ್ತವೆ. ನೀವು ಸೇವೆಗಳನ್ನು ಶುಲ್ಕಕ್ಕಾಗಿ ನೀಡುವಿರಾದರೆ (Street View ವಿಶ್ವಾಸಾರ್ಹ ಪೂರೈಕೆದಾರರೆಂದು ನಿಮ್ಮನ್ನು ಮಾರ್ಕೆಟ್ ಮಾಡಿಕೊಳ್ಳುವುದು), ನಿಷ್ಪಕ್ಷಪಾತವನ್ನು ಸೂಚಿಸುವ (ಉದಾಹರಣೆಗೆ, ಸ್ಥಳೀಯ ಮಾರ್ಗದರ್ಶಕರಾಗಿ ರೇಟಿಂಗ್ ಅಥವಾ ವಿಮರ್ಶೆಯನ್ನು ಪೋಸ್ಟ್ ಮಾಡಲು ನಿಮಗಿರುವ ಸಾಮರ್ಥ್ಯ) ಇತರ ಯಾವುದೇ ವೃತ್ತಿಪರವಲ್ಲದ ಸೇವೆಗಳೊಂದಿಗೆ ಈ ವೃತ್ತಿಪರ ಸೇವೆಗಳನ್ನು ನೀವು ಬಂಡಲ್ ಮಾಡಬಾರದು ಎಂಬುದನ್ನು ಮರೆಯಬೇಡಿ.
Google ಬ್ರ್ಯಾಂಡ್ಗಳ ಸೂಕ್ತ ಬಳಕೆ
ವಿಶ್ವಾಸಾರ್ಹ ಸ್ಥಾನಮಾನವನ್ನು ಗಳಿಸಿದ ಫೋಟೋಗ್ರಾಫರ್ಗಳು ಮತ್ತು ಕಂಪನಿಗಳು ಮಾತ್ರ Google Maps ಗಲ್ಲಿ ವೀಕ್ಷಣೆ ಬ್ರ್ಯಾಂಡ್ ಮತ್ತು ವಿಶ್ವಾಸಾರ್ಹ ಬ್ಯಾಡ್ಜ್ ಅನ್ನು ಮಾರ್ಕೆಟಿಂಗ್ ಸ್ವತ್ತುಗಳನ್ನಾಗಿ ಬಳಸಬಹುದಾಗಿದೆ. ವಿಶ್ವಾಸಾರ್ಹ ಫೋಟೋಗ್ರಾಫರ್ ಆಗಿರುವುದರಿಂದ, ನಿಮ್ಮ ವಿಶೇಷ ಸ್ಥಾನವನ್ನು ಮತ್ತಷ್ಟು ಹೆಚ್ಚಿಸಿಕೊಳ್ಳಲು ನಾವು ನಿಮಗೆ ಆಹ್ವಾನ ನೀಡುತ್ತೇವೆ. Google Maps, ಗಲ್ಲಿ ವೀಕ್ಷಣೆ ಅಥವಾ ಯಾವುದೇ ಇತರ ಸಂಬಂಧಿತ ಲಾಂಛನಗಳು ಸೇರಿದಂತೆ ವಿಶ್ವಾಸಾರ್ಹ ಬ್ಯಾಡ್ಜ್, ಅಕ್ಷರ ರೂಪದ ಗುರುತುಗಳು ಮತ್ತು ಬ್ರ್ಯಾಂಡಿಂಗ್ ಅಂಶಗಳನ್ನು ವಿಶ್ವಾಸಾರ್ಹ ಫೋಟೋಗ್ರಾಫರ್ಗಳು ಬಳಸಬಹುದಾಗಿದೆ. ನೀವು ಅವುಗಳೊಂದಿಗೆ ಮಾಡಬಹುದಾದ ಮತ್ತು ಮಾಡಬಾರದ ಕೆಲವು ಅಂಶಗಳನ್ನು ನಾವು ಈ ಕೆಳಗೆ ಪಟ್ಟಿ ಮಾಡಿದ್ದೇವೆ. Google ಬ್ರ್ಯಾಂಡ್ ಸ್ವತ್ತುಗಳ ಪರವಾನಗಿಯುಕ್ತ ಬಳಕೆಯನ್ನು ಯಾರೋ ಉಲ್ಲಂಘಿಸಿದ್ದಾರೆ ಎಂದು ನೀವು ಭಾವಿಸಿದರೆ, ನೀವು ಸಮಸ್ಯೆಗಳನ್ನು ಇಲ್ಲಿ ವರದಿ ಮಾಡಬಹುದಾಗಿದೆ. ಇತರ ಎಲ್ಲಾ Google ಬ್ರ್ಯಾಂಡ್ ಸ್ವತ್ತುಗಳಿಗೆ, ನೀವು ಅಸಮರ್ಪಕ ಬಳಕೆಗಳನ್ನು ಇಲ್ಲಿ ವರದಿ ಮಾಡಬಹುದಾಗಿದೆ.
ವಿಶ್ವಾಸಾರ್ಹ ಬ್ಯಾಡ್ಜ್ ಬಳಕೆ
- ನೀವು Street View ವಿಶ್ವಾಸಾರ್ಹ ಪ್ರೋಗ್ರಾಂನ ದೃಢೀಕೃತ ಸದಸ್ಯರಾಗಿದ್ದರೆ, ವಿಶ್ವಾಸಾರ್ಹ ಬ್ಯಾಡ್ಜ್ ಹಾಗೂ ಬ್ರ್ಯಾಂಡಿಂಗ್ ಎಲಿಮೆಂಟ್ಗಳನ್ನು ಮಾತ್ರ ಬಳಸಬಹುದು.
- ನೀವು ವಿಶ್ವಾಸಾರ್ಹ ಬ್ಯಾಡ್ಜ್ ಅನ್ನು ಎಲ್ಲಿ ಡಿಸ್ಪ್ಲೇ ಮಾಡುವಿರಿ ಎಂಬುದನ್ನು ಲೆಕ್ಕಿಸದೆ, ಅದನ್ನು ಸಾಕಷ್ಟು ಪ್ಯಾಡಿಂಗ್ ಇರುವ ಬಿಳಿ ಹಿನ್ನೆಲೆಯ ಮೇಲೆ ಮಾತ್ರ ತೋರಿಸಿ.
- ವಿಶ್ವಾಸಾರ್ಹ ಬ್ಯಾಡ್ಜ್ ಅನ್ನು ನಿಮ್ಮ ಹೆಸರು ಅಥವಾ ಕಂಪನಿ ಹೆಸರು ಮತ್ತು ಲೋಗೋ ಸಹಯೋಗದಲ್ಲಿ ಮಾತ್ರ ಬಳಸಿ.
- ನೀವು ವಿಶ್ವಾಸಾರ್ಹ ಬ್ಯಾಡ್ಜ್ ಮತ್ತು ಬ್ರ್ಯಾಂಡಿಂಗ್ ಅಂಶಗಳನ್ನು ವೆಬ್ಸೈಟ್ಗಳು, ಪ್ರಸ್ತುತಿಗಳು, ವ್ಯಾಪಾರದ ಉಡುಗೆ ಮತ್ತು ಮುದ್ರಿತ ಮಾರಾಟ ಸಾಮಗ್ರಿಗಳಲ್ಲಿ ಬಳಸಬಹುದು.
- ಬ್ಯಾಡ್ಜ್ ಮತ್ತು ಬ್ರ್ಯಾಂಡಿಂಗ್ ಅಂಶಗಳು ಪುಟ/ಬಟ್ಟೆಯ ಮೇಲಿರುವ ಅತ್ಯಂತ ಪ್ರಮುಖವಾದ ಅಂಶಗಳಾಗಿಲ್ಲ ಎಂಬುದನ್ನು ಖಚಿತಪಡಿಸಿಕೊಳ್ಳಿ.
- ಯಾವುದೇ ಗ್ರಾಫಿಕ್ಗಳನ್ನು ಸೇರಿಸುವುದು, ಚಿತ್ರಗಳನ್ನು ಹಿಗ್ಗಿಸುವುದು ಅಥವಾ ಅನುವಾದ ಮಾಡುವುದನ್ನು ಸೇರಿದಂತೆ Google Maps, ಗಲ್ಲಿ ವೀಕ್ಷಣೆ ಅಥವಾ ವಿಶ್ವಾಸಾರ್ಹ ಬ್ಯಾಡ್ಜ್, ಲೋಗೋಗಳು ಅಥವಾ ಅಕ್ಷರ ರೂಪದ ಗುರುತುಗಳನ್ನು ಬದಲಿಸಬೇಡಿ.
- ಬ್ಯಾಡ್ಜ್ ಅನ್ನು ದಾರಿ ತಪ್ಪಿಸುವಂತೆ ಬಳಸಬೇಡಿ ಅಥವಾ ದುರ್ಬಳಕೆ ಮಾಡಬೇಡಿ. ಉದಾಹರಣೆಗೆ, ಯಾವುದೇ ಉತ್ಪನ್ನ ಅಥವಾ ಸೇವೆಯನ್ನು Google ಅನುಮೋದಿಸುತ್ತದೆ ಎಂದು ತೋರುವ ರೀತಿಯಲ್ಲಿ ಬ್ಯಾಡ್ಜ್ ಬಳಸುವುದು.
ನಿಮ್ಮ ಸೇವೆಗಳನ್ನು ಮಾರಾಟ ಮಾಡುವಾಗ
- ವೃತ್ತಿಪರತೆಯಿಂದ ಕೂಡಿದ 360 ಡಿಗ್ರಿ ಫೋಟೋಗಳನ್ನು ನಿಮ್ಮ ವ್ಯಾಪಾರದ ಸೇವೆಗಳಲ್ಲೊಂದಾಗಿ ಸೇರಿಸಿ.
- ವ್ಯಾಪಾರಿಗಳ ಜೊತೆ ಸಂವಹನ ನಡೆಸುವಾಗ ನೀವು ವಿಶ್ವಾಸಾರ್ಹ ಪ್ರೋಗ್ರಾಂನ ಭಾಗವಾಗಿದ್ದೀರಿ ಎಂಬುದನ್ನು ತಪ್ಪಾಗಿ ಪ್ರತಿನಿಧಿಸಬೇಡಿ ಅಥವಾ ಮರೆಮಾಡಬೇಡಿ.
- ನಿಮ್ಮ ಸ್ಥಳೀಯ ಮಾರ್ಗದರ್ಶಕ ಸದಸ್ಯತ್ವದ ಜೊತೆಗೆ (Street View ವಿಶ್ವಾಸಾರ್ಹ ಸೇವಾ ಪೂರೈಕೆದಾರರಾಗಿ ನಿಮ್ಮನ್ನು ನೀವು ಪ್ರಚಾರ ಮಾಡಿಕೊಳ್ಳುವಿಕೆ) ಶುಲ್ಕಕ್ಕಾಗಿ ನೀವು ಒದಗಿಸುವ ಯಾವುದೇ ಸೇವೆಗಳನ್ನು ಬಂಡಲ್ ಮಾಡಬೇಡಿ.
ನಿಮ್ಮ ವೆಬ್ಸೈಟ್ನ ಬ್ರ್ಯಾಂಡಿಂಗ್
- Google, Google Maps, Street View, ವಿಶ್ವಾಸಾರ್ಹ ಬ್ಯಾಡ್ಜ್ ಅಥವಾ ಇತರ ಯಾವುದೇ Google ಟ್ರೇಡ್ಮಾರ್ಕ್ ಅಥವಾ ಅದೇ ತೆರನಾದವುಗಳನ್ನು ಡೊಮೇನ್ ಹೆಸರಿನಲ್ಲಿ ಬಳಸಬೇಡಿ.
- ನಿಮ್ಮ ವೆಬ್ಸೈಟ್ನಲ್ಲಿ ವಿಶ್ವಾಸಾರ್ಹ ಬ್ಯಾಡ್ಜ್ ಅನ್ನು ನೀವು ಪ್ರದರ್ಶಿಸಬಹುದು.
ನಿಮ್ಮ ವಾಹನದ ಬ್ರ್ಯಾಂಡಿಂಗ್
- ವಾಹನದಲ್ಲಿ ಗ್ರಾಫಿಕ್ಸ್ ಪ್ರದರ್ಶಿಸುವಾಗ, ನೀವು ನಿಮ್ಮ ಸ್ವಂತ ಬ್ರ್ಯಾಂಡ್ ಮತ್ತು ಲೋಗೋ ಅನ್ನು ಮಾತ್ರ ಬಳಸಬಹುದು.
- Street View ಐಕಾನ್, ಬ್ಯಾಡ್ಜ್ ಮತ್ತು ಲೋಗೋ ಸೇರಿದಂತೆ ವಾಹನದಲ್ಲಿ ಯಾವುದೇ Google ಬ್ರ್ಯಾಂಡಿಂಗ್ ಎಲಿಮೆಂಟ್ಗಳನ್ನು ಪ್ರದರ್ಶನ ಮಾಡಬೇಡಿ.
360 ಡಿಗ್ರಿ ಚಿತ್ರಗಳ ಕೆಳಭಾಗದಲ್ಲಿ/ಮೇಲಿರುವ ಬ್ರ್ಯಾಂಡಿಂಗ್
- ಅತ್ಯಂತ ಕೆಳಭಾಗ/ಮೇಲ್ಭಾಗದ ಪ್ರಕಾರ ಸೂಕ್ತ ಗಾತ್ರದಲ್ಲಿ ನಿಮ್ಮ ಕಂಪನಿಯ ಲೋಗೋ/ಹೆಸರನ್ನು ಬಳಸಿ. ಯಾವುದೇ ಫಾರ್ಮ್ಯಾಟ್ನ ನಿರ್ದಿಷ್ಟ ಮಾನದಂಡಗಳ ಕುರಿತಾದ ಕಾರ್ಯನೀತಿ ಮಾರ್ಗಸೂಚಿಗಳನ್ನು ಪರಿಶೀಲಿಸಿ.
- ನಿಮ್ಮ ಇಮೇಜರಿಯ ಕೆಳಭಾಗದಲ್ಲಿ ಅಥವಾ ನಿಮ್ಮ ವಾಹನದ ಮೇಲ್ಭಾಗದಲ್ಲಿ ಬ್ರ್ಯಾಂಡಿಂಗ್ ಸೇರಿಸುವಾಗ, ನೀವು ಹೀಗೆ ಮಾಡಬೇಕು:
- ಬ್ರ್ಯಾಂಡಿಂಗ್ ಅನ್ನು ಬಳಸಲು ಅನುಮತಿ ಪಡೆಯಿರಿ.
- ಸಂಬಂಧಿತ ವಿಷಯವನ್ನು (ಉದಾ, ಸ್ಥಳೀಯ ಪ್ರವಾಸೋದ್ಯಮವನ್ನು ಉತ್ತೇಜಿಸುವುದು) ಅಥವಾ ಗುಣಲಕ್ಷಣಕ್ಕೆ ಸೀಮಿತವಾಗಿರುವುದನ್ನು ಮಾತ್ರ ತೋರಿಸಿ.
- ಪ್ರಾಯೋಜಕತ್ವ/ಗುಣಲಕ್ಷಣದ ವಿಷಯದಲ್ಲಿ, ಪ್ರದರ್ಶಿಸುವ ಬ್ರ್ಯಾಂಡಿಂಗ್ ಅಂಶಗಳು ಕೆಳಗಿನ ಮಾನದಂಡಗಳನ್ನು ಪೂರೈಸಬೇಕು:
- Google ಬ್ರ್ಯಾಂಡ್ ಸ್ವತ್ತಿನ ವಿಷಯದೊಂದಿಗೆ ತೋರಿಸಬಾರದು.
- ಯಾವುದೇ ಪ್ರಚಾರದ ಗ್ರಾಫಿಕ್ಗಳು ಅಥವಾ ಭಾಷೆಯೊಂದಿಗೆ ಇರಬಾರದು (ತೋರಿಸಿದ ಸ್ಥಳಕ್ಕೆ ಸಂಬಂಧಿಸಿರುವುದನ್ನು ಬಿಟ್ಟು ಬೇರೆ ಇರಬಾರದು).
- "ಪ್ರಾಯೋಜಿತ" ಅಥವಾ ಇದಕ್ಕೆ ಸಮಾನವಾದ ಅನುವಾದ ವಾಕ್ಯವನ್ನು ಸೇರಿಸಿ.
- 360 ಡಿಗ್ರಿ ಚಿತ್ರಗಳ ಕೆಳಭಾಗದಲ್ಲಿ/ಮೇಲ್ಭಾಗದಲ್ಲಿ ವಿಶ್ವಾಸಾರ್ಹ ಬ್ಯಾಡ್ಜ್ ಅಥವಾ ಯಾವುದೇ ಇತರ Google ಬ್ರ್ಯಾಂಡಿಂಗ್ ಅಂಶವನ್ನು ಬಳಸಬೇಡಿ (ನಿಮ್ಮ ಕ್ಯಾಮರಾಗೆ ಕಾಣಿಸುವ ಯಾವುದೇ ಛಾವಣಿಯ ಗ್ರಾಫಿಕ್ಸ್ ಸಹಿತ).
ಈ ಮಾರ್ಗಸೂಚಿಗಳ ಜೊತೆಗೆ, ನೀವು ಸರಿಯಾದ ಬಳಕೆಯ ಕುರಿತಾದ Google ನ ನಿಯಮಗಳು, ಬ್ರ್ಯಾಂಡ್ ನಿಯಮಗಳು ಮತ್ತು ನಿಬಂಧನೆಗಳು, Geo ಬಳಕೆಯ ಮಾರ್ಗಸೂಚಿಗಳು ಮತ್ತು ಎಲ್ಲಾ ಇತರ Google ಟ್ರೇಡ್ಮಾರ್ಕ್ಗಳ ಬಳಕೆಯ ಮಾರ್ಗಸೂಚಿಗಳನ್ನು ಅನುಸರಿಸುತ್ತಿರುವಿರಿ ಎಂದು ಖಚಿತಪಡಿಸಿಕೊಳ್ಳಿ.
Google ಜಾಹೀರಾತುಗಳಲ್ಲಿ ನಿಮ್ಮ ವ್ಯಾಪಾರದ ಜಾಹೀರಾತು ನೀಡುವಿಕೆ
ನೀವು ಬಯಸಿದರೆ, ನಿಮ್ಮ ಜಾಹೀರಾತುಗಳಲ್ಲಿ 'ವಿಶ್ವಾಸಾರ್ಹ ಫೋಟೋಗ್ರಾಫರ್ ಪ್ರೋಗ್ರಾಂ' ಎಂಬ ಪದವನ್ನು ಬಳಸುವ ಮೂಲಕ Google ಜಾಹೀರಾತುಗಳಲ್ಲಿ ನಿಮ್ಮ ವ್ಯಾಪಾರದ ಜಾಹೀರಾತನ್ನು ನೀಡಬಹುದು. ನಿಮ್ಮ ಜಾಹೀರಾತುಗಳಲ್ಲಿ "Street View" ಬ್ರ್ಯಾಂಡ್ ಅನ್ನು ಅಥವಾ ಯಾವುದೇ ಇತರ Google ಬ್ರ್ಯಾಂಡ್ ಅನ್ನು ಬಳಸಲು ನಿಮಗೆ ಅನುಮತಿಸಲಾಗುವುದಿಲ್ಲ ಎಂಬುದನ್ನು ಗಮನಿಸಿ.
ನಿಮ್ಮ Google ಬ್ಯುಸಿನೆಸ್ ಪ್ರೊಫೈಲ್ನ ಬ್ರ್ಯಾಂಡಿಂಗ್
ನೀವು Google Business Profile ಅನ್ನು ಹೊಂದಿದ್ದರೆ, ನೀವು Google Business Profile ಕಾರ್ಯನೀತಿಗಳನ್ನು, ಮತ್ತು ವಿಶೇಷವಾಗಿ Google ನಲ್ಲಿ ನಿಮ್ಮ ವ್ಯಾಪಾರವನ್ನು ಪ್ರತಿನಿಧಿಸಲು ಇರುವ ಮಾರ್ಗಸೂಚಿಗಳನ್ನು ಅನುಸರಿಸಬೇಕು.
Google, Google Maps, ಗಲ್ಲಿ ವೀಕ್ಷಣೆ, ಅಥವಾ ಇತರ ಯಾವುದೇ Google ಟ್ರೇಡ್ಮಾರ್ಕ್ — ಅಥವಾ ಅದಕ್ಕೆ ಸಮನಾಗಿರುವುದನ್ನು ನಿಮ್ಮ Google ಬ್ಯುಸಿನೆಸ್ ಪ್ರೊಫೈಲ್ ಹೆಸರಿನಲ್ಲಿ ಬಳಸಬೇಡಿ.
ನಿಮಗೆ ವಿಶ್ವಾಸಾರ್ಹ ಸ್ಥಾನಮಾನವು ದೊರೆತ ನಂತರ, ನಿಮ್ಮ ವಿಶ್ವಾಸಾರ್ಹ ಬ್ಯಾಡ್ಜ್ ಅನ್ನು ನಿಮ್ಮ ಪ್ರೊಫೈಲ್ನಲ್ಲಿ ಅಪ್ಲೋಡ್ ಮಾಡಬಹುದು.
ಗಮನಿಸಿ: ನೀವು ಈ ಮಾರ್ಗಸೂಚಿಗಳನ್ನು ಅನುಸರಿಸದಿದ್ದರೆ, ಪ್ರೋಗ್ರಾಂನಲ್ಲಿ ನೀವು ಹೊಂದಿರುವ ಸ್ಥಾನಮಾನವನ್ನು ಹಾಗೂ ವಿಶ್ವಾಸಾರ್ಹ ಬ್ಯಾಡ್ಜ್ ಹಾಗೂ ಇತರ ಬ್ರ್ಯಾಂಡಿಂಗ್ ಅಂಶಗಳ ಬಳಕೆಯ ಹಕ್ಕನ್ನು ನೀವು ಕಳೆದುಕೊಳ್ಳಬಹುದು.
ವಿಶ್ವಾಸಾರ್ಹ ಚಿತ್ರ ಗುಣಮಟ್ಟದ ಅಗತ್ಯತೆಗಳು
ಚಿತ್ರದ ಗುಣಮಟ್ಟ
- 7.5 MP ಅಥವಾ ಅದಕ್ಕಿಂತ ದೊಡ್ಡದು (3,840 x 1,920 ಪಿಕ್ಸೆಲ್)
- ಚಿತ್ರದ ದೃಶ್ಯಾನುಪಾತ 2:1
- ಚಿತ್ರದ ಸುತ್ತಲಿನ ಅಂಚುಗಳಲ್ಲಿ ಹೆಚ್ಚು ಅಂತರವಿರಬಾರದು
- ಚಿತ್ರಗಳ ಜೋಡಣೆಯಲ್ಲಿ ಗಮನಾರ್ಹ ದೋಷಗಳಿರಬಾರದು
- ಮಸುಕಾದ/ಕತ್ತಲಿನ ಪ್ರದೇಶಗಳಲ್ಲಿ ಸಾಕಷ್ಟು ಸ್ಪಷ್ಟ ವಿವರಣೆಗಳು
- ತೀಕ್ಷ್ಣತೆ: ಫೋಕಸ್ನಲ್ಲಿ ಮೋಷನ್ ಬ್ಲರ್ ಇರಬಾರದು
- ಚಿತ್ರದ ಅತ್ಯಂತ ಕೆಳಭಾಗ ಸೇರಿ, ಎಲ್ಲಿಯೂ ಯಾವುದೇ ವಿಚಲಿತಗೊಳಿಸುವ ಎಫೆಕ್ಟ್ಗಳು ಅಥವಾ ಫಿಲ್ಟರ್ಗಳಿರಬಾರದು
ಸಂಪರ್ಕ ಕಲ್ಪಿಸುವಿಕೆ
- ಎಲ್ಲಾ ಸಂಪರ್ಕಿತ 360 ಡಿಗ್ರಿ ಫೋಟೋಗಳು ಸ್ಪಷ್ಟವಾದ ನೇರ ನೋಟವನ್ನು ಹೊಂದಿರಬೇಕು
- 1 ಮೀಟರ್ ಸ್ಥಳವನ್ನು ಹೊಂದಿರುವ ಒಳಾಂಗಣದಲ್ಲಿ ಮತ್ತು ಪ್ರತಿ 3ಮೀ ಹೊರಾಂಗಣದಲ್ಲಿ ಚಿತ್ರೀಕರಿಸಿ
- ಗಲ್ಲಿಯೊಂದಕ್ಕೆ ಸಂಬಂಧಿಸಿದ ನಿಮ್ಮ ಸಂಗ್ರಹಣೆಯನ್ನು ವಿಸ್ತರಿಸುವ ಮೂಲಕ ನಮ್ಮ ಜೊತೆಗೆ ಕನೆಕ್ಟ್ ಆಗುವ ಸಾಧ್ಯತೆಗಳನ್ನು ಹೆಚ್ಚಿಸಿಕೊಳ್ಳಿ
ಸೂಕ್ತತೆ
- ಜನರು ಮತ್ತು ಸ್ಥಳವನ್ನು ತೋರಿಸಲು ಅವರ ಸಮ್ಮತಿ
- ಭೌಗೋಳಿಕವಾಗಿ ನಿಖರವಾದ ಸ್ಥಳ
- ಇಮೇಜ್ ಮಿರರಿಂಗ್ ಅಥವಾ ವಾರ್ಪಿಂಗ್ ಸೇರಿದಂತೆ ಕಂಪ್ಯೂಟರ್ ರಚಿಸಿದ ಸ್ಥಳಗಳು ಅಥವಾ ವಿಶೇಷ ಎಫೆಕ್ಟ್ಗಳು ಇರಬಾರದು
- ಚಿತ್ರದ ಕೆಳಭಾಗ ಹೊರತು ಪಡಿಸಿ ಬೇರೆ ಕಡೆ, ಚಿತ್ರದ ಕೃಪೆ ಒದಗಿಸಿದವರ ಮಾಹಿತಿ ನೀಡಬಾರದು
- ದ್ವೇಷಪೂರಿತ ಅಥವಾ ಕಾನೂನುಬಾಹಿರ ವಿಷಯಗಳಿರಬಾರದು
ನಿಷೇಧಿಸಲಾದ ಅಭ್ಯಾಸಗಳು
ಸೂಕ್ತವಲ್ಲದ ವಿಷಯ
ನಿಷೇಧಿತ ಮತ್ತು ನಿರ್ಬಂಧಿತ ವಿಷಯವನ್ನು Maps ಬಳಕೆದಾರರು ನೀಡಿದ ವಿಷಯ ನೀತಿಯಲ್ಲಿ ಹುಡುಕಬಹುದು.
ನೀವು "ಸಮಸ್ಯೆ ವರದಿ ಮಾಡಿ" ಲಿಂಕ್ ಬಳಸಿಕೊಂಡು ಅನುಚಿತವಾದ ಕಂಟೆಂಟ್ ಅನ್ನು ವರದಿ ಮಾಡಬಹುದು.
ತಪ್ಪಾದ, ದಾರಿತಪ್ಪಿಸುವ ಅಥವಾ ಅವಾಸ್ತವಿಕ ಕ್ಲೈಮ್ಗಳು
Street View ವಿಶ್ವಾಸಾರ್ಹ ಫೋಟೋಗ್ರಾಫರ್ ಕ್ಲೈಂಟ್ಗಳು Street View ವಿಶ್ವಾಸಾರ್ಹ ಫೋಟೋಗ್ರಾಫರ್ಗಳ ಜೊತೆಗೆ ಕೆಲಸ ಮಾಡುವ ಕುರಿತು ಸೂಕ್ತ ನಿರ್ಧಾರಗಳನ್ನು ತೆಗೆದುಕೊಳ್ಳಬೇಕೆಂದು ನಾವು ಬಯಸುತ್ತೇವೆ, ಅಂದರೆ ನಿಮ್ಮ ಕಂಪನಿ, ನಿಮ್ಮ ಸೇವೆಗಳು, ಆ ಸೇವೆಗಳಿಗೆ ಸಂಬಂಧಿಸಿದ ವೆಚ್ಚಗಳು ಮತ್ತು ನಿಮ್ಮ ಕ್ಲೈಂಟ್ಗಳು ನಿರೀಕ್ಷಿಸಬಹುದಾದ ಫಲಿತಾಂಶಗಳನ್ನು ವಿವರಿಸಲು ನೀವು ಮುಂಚೂಣಿಯಲ್ಲಿರಬೇಕು ಮತ್ತು ಪ್ರಾಮಾಣಿಕರಾಗಿರಬೇಕು. ತಪ್ಪಾದ, ದಾರಿತಪ್ಪಿಸುವ ಅಥವಾ ಅವಾಸ್ತವಿಕ ಕ್ಲೈಮ್ಗಳನ್ನು ಮಾಡಬೇಡಿ.
ಉದಾಹರಣೆಗಳು:
- Google ಜೊತೆಗಿನ ಸುಳ್ಳು ಸಂಬಂಧವನ್ನು ಕ್ಲೈಮ್ ಮಾಡುವುದು
- Google Street View ಅಥವಾ Google Maps ನಲ್ಲಿ ಟಾಪ್ ಸ್ಥಾನವನ್ನು ನೀಡುವುದಾಗಿ ಭರವಸೆ ನೀಡುವುದು
ಕಿರುಕುಳ, ನಿಂದನೀಯ ಅಥವಾ ವಿಶ್ವಾಸಾರ್ಹವಲ್ಲದ ವರ್ತನೆ
Street View ಕ್ಲೈಂಟ್ಗಳು Google ಜೊತೆಗೆ ನೇರವಾಗಿ ಕೆಲಸ ಮಾಡಿದಾಗ ಪಡೆಯುವಂತೆ, Street View ಫೋಟೋಗ್ರಾಫರ್ರಿಂದ ಅವರು ಅತ್ಯುತ್ತಮ ಸೇವೆಯನ್ನು ಪಡೆಯಬೇಕು. ಸಂಭಾವ್ಯ ಅಥವಾ ಅಸ್ತಿತ್ವದಲ್ಲಿರುವ ಗ್ರಾಹಕರ ಜೊತೆಗೆ ಕಿರುಕುಳ, ನಿಂದನೀಯ ಅಥವಾ ವಿಶ್ವಾಸಾರ್ಹವಲ್ಲದ ತಂತ್ರಗಳನ್ನು ಬಳಸಬೇಡಿ.
ಉದಾಹರಣೆಗಳು:
- ಸಂಭಾವ್ಯ ಗ್ರಾಹಕರಿಗೆ ಹೆಚ್ಚು ಬಾರಿ ಕರೆ ಮಾಡುವಿಕೆ
- ಸೈನ್ ಅಪ್ ಮಾಡಲು ಅಥವಾ ನಿಮ್ಮ ಏಜೆನ್ಸಿಯ ಜೊತೆಗೆ ಉಳಿಯಲು ಜಾಹೀರಾತುದಾರರ ಮೇಲೆ ಅನಗತ್ಯ ಒತ್ತಡ ಹೇರುವುದು
- ನಿಮ್ಮ ಪರವಾಗಿ ಇತರರು Google ಪ್ರಮಾಣೀಕರಣದ ಪರೀಕ್ಷೆಗಳನ್ನು ತೆಗೆದುಕೊಳ್ಳುವುದು
- ಫಿಶಿಂಗ್
- ಪಾವತಿಗೆ ಬದಲಾಗಿ Google ಜಾಹೀರಾತು ಕೂಪನ್ಗಳನ್ನು ನೀಡುವುದು
ನಮ್ಮ ಕಾರ್ಯನೀತಿಗಳ ಕುರಿತು
Google ನ Street View ವಿಶ್ವಾಸಾರ್ಹ ಫೋಟೋಗ್ರಾಫರ್ಗಳ ಕಾರ್ಯನೀತಿಯ ಕುರಿತು ನೀವು ಚೆನ್ನಾಗಿ ತಿಳಿದುಕೊಳ್ಳುವುದು ಮತ್ತು ಅಪ್ ಟು ಡೇಟ್ ಆಗಿರುವುದು ಬಹಳ ಮುಖ್ಯ. ನಮ್ಮ ಕಾರ್ಯನೀತಿಗಳನ್ನು ಉಲ್ಲಂಘಿಸುತ್ತೀರಿ ಎಂದು ನಮಗೆ ಅನಿಸಿದರೆ, ನಿಮ್ಮ ಅಭ್ಯಾಸಗಳ ಕುರಿತು ವಿವರವಾದ ಪರಿಶೀಲನೆಯನ್ನು ನಡೆಸಲು ಮತ್ತು ಸರಿಪಡಿಸುವ ಕ್ರಮವನ್ನು ತೆಗೆದುಕೊಳ್ಳುವ ಹಾಗೆ ವಿನಂತಿಸಲು ನಾವು ನಿಮ್ಮನ್ನು ಸಂಪರ್ಕಿಸಬಹುದು. ಪುನರಾವರ್ತಿತ ಅಥವಾ ಗಂಭೀರವಾದ ಉಲ್ಲಂಘನೆಗಳ ಸಂದರ್ಭಗಳಲ್ಲಿ, ನಾವು ನಿಮ್ಮನ್ನು ವಿಶ್ವಾಸಾರ್ಹ ಪ್ರೋಗ್ರಾಂನಿಂದ ಹೊರಗಿಡಬಹುದು ಮತ್ತು ಈ ಕುರಿತು ಗ್ರಾಹಕರಿಗೆ ತಿಳಿಸಲು ನಾವು ಅವರನ್ನು ಸಂಪರ್ಕಿಸಬಹುದು. Google Maps ಉತ್ಪನ್ನಗಳಿಗೆ ನೀವು ಕೊಡುಗೆ ನೀಡುವುದನ್ನು ಸಹ ನಾವು ತಡೆಯಬಹುದು.
ಈ ಕಾರ್ಯನೀತಿಗಳು ಥರ್ಡ್ ಪಾರ್ಟಿಗಳಿಗೆ ಅನ್ವಯಿಸಬಹುದಾದ ಯಾವುದೇ ಅಸ್ತಿತ್ವದಲ್ಲಿರುವ ನಿಯಮಗಳು ಮತ್ತು ಕಾರ್ಯನೀತಿಗಳಿಗೆ ಹೆಚ್ಚುವರಿಯಾಗಿ ಸೇರ್ಪಡೆಯಾಗಿರುತ್ತವೆ ಹಾಗೂ ಇವುಗಳನ್ನು ಒಳಗೊಂಡಿವೆ:
ನೀವು ಕಾರ್ಯನೀತಿಯನ್ನು ಉಲ್ಲಂಘಿಸಿದರೆ ಏನಾಗುತ್ತದೆ
ಅನುಸರಣೆಯ ಪರಿಶೀಲನೆ: Street View ವಿಶ್ವಾಸಾರ್ಹ ಫೋಟೋಗ್ರಾಫರ್ಗಳ ಕಾರ್ಯನೀತಿಯ ಅನುಸರಣೆಗಾಗಿ ನಿಮ್ಮ ವ್ಯಾಪಾರವನ್ನು ನಾವು ಯಾವಾಗ ಬೇಕಾದರೂ ಪರಿಶೀಲಿಸಬಹುದು. ಅನುಸರಣೆಗೆ ಸಂಬಂಧಿಸಿದ ಮಾಹಿತಿಯನ್ನು ವಿನಂತಿಸಲು ನಾವು ನಿಮ್ಮನ್ನು ಸಂಪರ್ಕಿಸಿದರೆ, ನೀವು ಸಮಯಕ್ಕೆ ಸರಿಯಾಗಿ ಪ್ರತಿಕ್ರಿಯಿಸಬೇಕು ಮತ್ತು ನಮ್ಮ ಕಾರ್ಯನೀತಿಗಳನ್ನು ಅನುಸರಿಸಲು ಅಗತ್ಯವಿರುವ ಯಾವುದೇ ಸರಿಪಡಿಸುವ ಕ್ರಮವನ್ನು ನೀವು ತ್ವರಿತವಾಗಿ ತೆಗೆದುಕೊಳ್ಳಬೇಕು. ಅನುಸರಣೆಯನ್ನು ಖಚಿತಪಡಿಸಿಕೊಳ್ಳಲು ನಿಮ್ಮ ಗ್ರಾಹಕರನ್ನು ಸಹ ನಾವು ಸಂಪರ್ಕಿಸಬಹುದು.
ಅನುಸರಿಸದಿರುವುದರ ಅಧಿಸೂಚನೆ: ನೀವು Street View ವಿಶ್ವಾಸಾರ್ಹ ಫೋಟೋಗ್ರಾಫರ್ಗಳ ಕಾರ್ಯನೀತಿಯನ್ನು ಉಲ್ಲಂಘಿಸುತ್ತಿದ್ದೀರಿ ಎಂದು ನಮಗೆ ಅನಿಸಿದರೆ, ಸರಿಪಡಿಸುವ ಕ್ರಮವನ್ನು ತೆಗೆದುಕೊಳ್ಳುವ ಹಾಗೆ ವಿನಂತಿಸಲು ನಾವು ಸಾಮಾನ್ಯವಾಗಿ ನಿಮ್ಮನ್ನು ಸಂಪರ್ಕಿಸುತ್ತೇವೆ. ನೀಡಿರುವ ಕಾಲಾವಧಿಯೊಳಗೆ ವಿನಂತಿಸಿದ ಸರಿಪಡಿಸುವಿಕೆಗಳನ್ನು ಮಾಡಲು ನೀವು ವಿಫಲವಾದರೆ, ನಾವು ಜಾರಿ ಕ್ರಮ ತೆಗೆದುಕೊಳ್ಳಬಹುದು. ಗಂಭೀರವಾದ ಅಥವಾ ಪುನರಾವರ್ತಿತ ಉಲ್ಲಂಘನೆಗಳ ಸಂದರ್ಭಗಳಲ್ಲಿ, ನಾವು ತಕ್ಷಣ ಮತ್ತು ಅಧಿಸೂಚನೆ ನೀಡದೆಯೇ ಕ್ರಮ ತೆಗೆದುಕೊಳ್ಳಬಹುದು.
ಥರ್ಡ್ ಪಾರ್ಟಿ ಪ್ರೋಗ್ರಾಂ ಅಮಾನತುಗೊಳಿಸುವಿಕೆ: Google Street View ವಿಶ್ವಾಸಾರ್ಹದಂತಹ Google ಥರ್ಡ್ ಪಾರ್ಟಿ ಪ್ರೋಗ್ರಾಂಗಳಲ್ಲಿನ ನಿಮ್ಮ ಭಾಗವಹಿಸುವಿಕೆಯನ್ನು Street View ವಿಶ್ವಾಸಾರ್ಹ ಫೋಟೋಗ್ರಾಫರ್ಗಳ ಕಾರ್ಯನೀತಿಯ ಅನುಸರಣೆಯ ಮೇಲೆ ಊಹಿಸಲಾಗಿದೆ ಮತ್ತು ನೀವು ನಮ್ಮ ಕಾರ್ಯನೀತಿಗಳನ್ನು ಉಲ್ಲಂಘಿಸುತ್ತಿರುವುದು ನಮಗೆ ಕಂಡುಬಂದರೆ ಅಥವಾ ಅನುಸರಣೆ ಕುರಿತು ನಿಮ್ಮ ವ್ಯಾಪಾರವನ್ನು ಪರಿಶೀಲಿಸುವ ನಮ್ಮ ಪ್ರಯತ್ನಗಳಿಗೆ ಸಹಕರಿಸಲು ವಿಫಲವಾದರೆ ಅದನ್ನು ಸೀಮಿತಗೊಳಿಸಬಹುದು ಅಥವಾ ಅಮಾನತುಗೊಳಿಸಬಹುದು.
Maps ಖಾತೆ ಅಮಾನತುಗೊಳಿಸುವಿಕೆ: ನೀವು ಗಂಭೀರವಾಗಿ ಕಾರ್ಯನೀತಿಯ ಉಲ್ಲಂಘನೆ ಮಾಡಿದರೆ, ನಿಮ್ಮ Google Maps ಖಾತೆಗಳನ್ನು ನಾವು ಅಮಾನತುಗೊಳಿಸಬಹುದು. ಪುನರಾವರ್ತಿತ ಅಥವಾ ವಿಶೇಷವಾಗಿ ಗಂಭೀರವಾದ ಕಾರ್ಯನೀತಿ ಉಲ್ಲಂಘನೆಗಳ ಸಂದರ್ಭಗಳಲ್ಲಿ, ನಿಮ್ಮ Google Maps ಖಾತೆಗಳನ್ನು ಶಾಶ್ವತವಾಗಿ ಅಮಾನತುಗೊಳಿಸಬಹುದು ಮತ್ತು ಇನ್ನು ಮುಂದೆ Google Maps ಗೆ ಕೊಡುಗೆ ನೀಡಲು ನಿಮಗೆ ಸಾಧ್ಯವಾಗದಿರಬಹುದು. ಹಾಗೆಯೇ, ಈ ಕುರಿತು ನಿಮ್ಮ ಗ್ರಾಹಕರಿಗೆ ತಿಳಿಸಲು ನಾವು ಅವರನ್ನು ಸಂಪರ್ಕಿಸಬಹುದು.
ಥರ್ಡ್ ಪಾರ್ಟಿ ಕಾರ್ಯನೀತಿಯ ಉಲ್ಲಂಘನೆಯನ್ನು ವರದಿ ಮಾಡಿ
ಥರ್ಡ್ ಪಾರ್ಟಿ ಪಾಲುದಾರರೊಬ್ಬರು ಈ ಕಾರ್ಯನೀತಿಯನ್ನು ಉಲ್ಲಂಘಿಸುತ್ತಿದ್ದಾರೆ ಎಂದು ನಿಮಗೆ ಅನಿಸುತ್ತಿದೆಯೇ? ನಮಗೆ ತಿಳಿಸಿ: