ನಿಮ್ಮ ಸುತ್ತಮುತ್ತಲಿನ ಪ್ರಪಂಚವನ್ನು ಅನ್ವೇಷಿಸುವುದಕ್ಕೆ ನಿಮಗೆ ಸಹಾಯ ಮಾಡಲು Google ಬದ್ಧವಾಗಿದೆ. ವಿಶ್ವದ ಮೂಲೆ ಮೂಲೆಗಳಲ್ಲಿರುವ ಅಥವಾ ಸಮೀಪದಲ್ಲಿರುವ ಸ್ಥಳಗಳನ್ನು ಪೂರ್ವವೀಕ್ಷಿಸಲು ಮತ್ತು ಎಕ್ಸ್ಪ್ಲೋರ್ ಮಾಡಲು ನಿಮಗೆ ಸಹಾಯ ಮಾಡುವ ಮೂಲಕ ನಿಮ್ಮ ಅನುಭವವನ್ನು ವರ್ಧಿಸುವುದು ನಮ್ಮ ಪ್ಲಾಟ್ಫಾರ್ಮ್ಗಳಲ್ಲಿರುವ ಚಿತ್ರಣದ ಉದ್ದೇಶವಾಗಿದೆ. ಚಿತ್ರಣವು ನಿಮಗೆ ಪ್ರಯೋಜನಕಾರಿಯಾಗುವಂತೆ ಮಾಡುವ ಜೊತೆಗೆ ನಮ್ಮ ಬಳಕೆದಾರರು ಎಕ್ಸ್ಪ್ಲೋರ್ ಮಾಡುವ ಜಗತ್ತನ್ನು ಅದು ಪ್ರತಿಬಿಂಬಿಸುವಂತೆ ಮಾಡಲು ನಾವು ವಿಶೇಷ ಕಾಳಜಿವಹಿಸುತ್ತೇವೆ.
ಬಾಹ್ಯ ಕೊಡುಗೆದಾರರು ಅಥವಾ Google, ಗಲ್ಲಿ ವೀಕ್ಷಣೆ ಚಿತ್ರಣವನ್ನು ಬಳಸಿಕೊಂಡು ಕೊಡುಗೆ ನೀಡಬಹುದಾಗಿದೆ. ಪ್ರತಿ ಚಿತ್ರದ ಜೊತೆಗೆ ಪ್ರಸ್ತುತಪಡಿಸಲಾದ ಹೆಸರು ಅಥವಾ ಐಕಾನ್ ಗುಣಲಕ್ಷಣವನ್ನು ಬಳಸಿಕೊಂಡು ನೀವು ವ್ಯತ್ಯಾಸವನ್ನು ಹೇಳಬಹುದು. ಬಾಹ್ಯ ಕೊಡುಗೆದಾರರ ಮೂಲಕ ಕ್ಯಾಪ್ಚರ್ ಮಾಡಿದ ಮತ್ತು Google ನಕ್ಷೆಗಳಲ್ಲಿ ಪ್ರಕಟಿಸಿದ ಚಿತ್ರಣವು ಆ ಕೊಡುಗೆದಾರರ (ಅಥವಾ ಅವರು ನಿಯೋಜಿಸುವ ಯಾವುದೇ ವಾರಸುದಾರರ) ಮಾಲೀಕತ್ವದಲ್ಲಿರುತ್ತದೆ.
ಈ ಪುಟವು Google-ಒದಗಿಸಿದ Street View ಇಮೇಜರಿ ಕಾರ್ಯನೀತಿಯನ್ನು ವಿವರಿಸುತ್ತದೆ. ಬಳಕೆದಾರರು-ಒದಗಿಸಿದ Street View ಇಮೇಜರಿಗಾಗಿ, Maps ಬಳಕೆದಾರರು ಒದಗಿಸಿದ ವಿಷಯ ನೀತಿಯನ್ನು ನೋಡಿ.
Google-ಒದಗಿಸಿದ Street View
ಇಮೇಜರಿ ಕಾರ್ಯನೀತಿ
Street View ಇಮೇಜರಿಯನ್ನು ವೀಕ್ಷಿಸುವ ಪ್ರತಿಯೊಬ್ಬರೂ ಧನಾತ್ಮಕ, ಪ್ರಯೋಜನಕಾರಿ ಅನುಭವ ಹೊಂದುವುದನ್ನು ಖಚಿತಪಡಿಸಿಕೊಳ್ಳುವುದಕ್ಕೆ ಸಹಾಯ ಮಾಡಲು, ನಾವು ಈ Google-ಒದಗಿಸಿದ Street View ಗಲ್ಲಿ ಕಾರ್ಯನೀತಿಯನ್ನು ಅಭಿವೃದ್ಧಿಪಡಿಸಿದ್ದೇವೆ. ಈ ಕಾರ್ಯನೀತಿಯು, ಅನುಚಿತವಾದ ಕಂಟೆಂಟ್ ಅನ್ನು ನಾವು ಹೇಗೆ ನಿಭಾಯಿಸುತ್ತೇವೆ ಹಾಗೂ Google Maps ನಲ್ಲಿ Street View ಇಮೇಜರಿಯನ್ನು ಪ್ರಕಟಿಸಲು ನಾವು ಬಳಸುವ ಮಾನದಂಡವನ್ನು ವಿವರಿಸುತ್ತದೆ. ನಾವು ಕೆಲವೊಮ್ಮೆ ನಮ್ಮ ಕಾರ್ಯನೀತಿಯನ್ನು ಅಪ್ಡೇಟ್ ಮಾಡಬಹುದಾಗಿರುವುದರಿಂದ, ಇವುಗಳನ್ನು ಕಾಲಕಾಲಕ್ಕೆ ಪರಿಶೀಲಿಸುತ್ತಿರಿ.
ಗಲ್ಲಿ ವೀಕ್ಷಣೆ ಚಿತ್ರಣವು ನೈಜ-ಸಮಯದ ಚಿತ್ರಣವಲ್ಲ
ಯಾವುದನ್ನೆಲ್ಲಾ ಕ್ಯಾಮರಾಗಳಿಗೆ ನೋಡಲು ಸಾಧ್ಯವಾಗುತ್ತದೋ ಹಾಗೂ ಅವು ಸ್ಥಳವೊಂದರ ಮೂಲಕ ಹಾದು ಹೋದ ದಿನದಂದು ಕಂಡದ್ದನ್ನು ಮಾತ್ರ Street View ಇಮೇಜರಿಯು ತೋರಿಸುತ್ತದೆ. ನಂತರ, ಅವುಗಳನ್ನು ಪ್ರಕ್ರಿಯೆಗೊಳಿಸಲು ತಿಂಗಳುಗಳು ಬೇಕಾಗುತ್ತದೆ. ಅಂದರೆ, ನೀವು ನೋಡುವ ವಿಷಯ, ಅಂದರೆ ಚಿತ್ರವು, ಕೆಲವು ತಿಂಗಳುಗಳ ಹಿಂದಿನದಾಗಿರಬಹುದು ಇಲ್ಲವೇ ವರ್ಷಗಳಷ್ಟು ಹಳೆಯದಾಗಿರಬಹುದು. ನಾವು ಅನೇಕ ವರ್ಷಗಳಿಂದ ಇಮೇಜರಿಯನ್ನು ಸಂಗ್ರಹಿಸಿರುವಂತಹ ಕೆಲವು ಸ್ಥಳಗಳಲ್ಲಿ, ನಮ್ಮ ಟೈಮ್ ಮಷೀನ್ ಫಂಕ್ಷನ್ ಮೂಲಕ ಆ ಇಮೇಜರಿಗೆ ಮಾಡಿರುವ ಬದಲಾವಣೆಗಳನ್ನು ಸಹ ನಿಮಗೆ ವೀಕ್ಷಿಸಲು ಸಾಧ್ಯವಾಗುತ್ತದೆ.
ಮಸುಕುಗೊಳಿಸುವಿಕೆ
ಗಲ್ಲಿ ವೀಕ್ಷಣೆ ಚಿತ್ರಣವನ್ನು Google Maps ನಲ್ಲಿ ಪ್ರಕಟಿಸಿದಾಗ, ಪ್ರತಿಯೊಬ್ಬರ ಗೌಪ್ಯತೆಯನ್ನು ರಕ್ಷಿಸಲು Google ಹಲವಾರು ಕ್ರಮಗಳನ್ನು ತೆಗೆದುಕೊಳ್ಳುತ್ತದೆ.
ಮುಖ ಮತ್ತು ಪರವಾನಗಿ ಫಲಕವನ್ನು ಮಸುಕುಗೊಳಿಸಲು ನಾವು ಪರಿಣಾಮಕಾರಿ ತಂತ್ರಜ್ಞಾನವನ್ನು ಅಭಿವೃದ್ಧಿಪಡಿಸಿದ್ದೇವೆ. Street View ನಲ್ಲಿನ Google-ಒದಗಿಸಿದ ಇಮೇಜರಿಯಲ್ಲಿ ಗುರುತಿಸಬಹುದಾದ ಮುಖಗಳು ಮತ್ತು ಪರವಾನಗಿ ಫಲಕಗಳನ್ನು ಮಸುಕುಗೊಳಿಸಲು ಈ ತಂತ್ರಜ್ಞಾನವನ್ನು ವಿನ್ಯಾಸಗೊಳಿಸಲಾಗಿದೆ. ಒಂದು ವೇಳೆ ನಿಮ್ಮ ಮುಖ ಅಥವಾ ಪರವಾನಗಿ ಫಲಕವನ್ನು ಹೆಚ್ಚುವರಿ ಮಸುಕುಗೊಳಿಸಬೇಕು ಎಂದು ಅಥವಾ ನಿಮ್ಮ ಇಡೀ ಮನೆ, ಕಾರ್, ಅಥವಾ ದೇಹವನ್ನು ನಾವು ಮಸುಕುಗೊಳಿಸಬೇಕೆಂದು ನೀವು ಬಯಸಿದಲ್ಲಿ "ಸಮಸ್ಯೆಯನ್ನು ವರದಿಮಾಡಿ" ಸೌಲಭ್ಯದ ಮೂಲಕ ವಿನಂತಿಯನ್ನು ಸಲ್ಲಿಸಿ.
ಸೂಕ್ತವಲ್ಲದ ವಿಷಯ
"ಸಮಸ್ಯೆ ವರದಿ ಮಾಡಿ" ಲಿಂಕ್ ಬಳಸಿಕೊಂಡು ಅನುಚಿತವಾದ ಕಂಟೆಂಟ್ ಅನ್ನು ನೀವು ವರದಿ ಮಾಡಬಹುದು. ಕಲಾತ್ಮಕ, ಶೈಕ್ಷಣಿಕ ಅಥವಾ ಸಾಕ್ಷ್ಯಚಿತ್ರದ ಮೌಲ್ಯವನ್ನು ಹೊಂದಿರುವ ವಿಷಯವನ್ನು ಹೊರತುಪಡಿಸಿ, ಈ ಕೆಳಗಿನ ವರ್ಗಗಳನ್ನು ಅನುಚಿತವಾದ ಕಂಟೆಂಟ್ ಎಂಬುದಾಗಿ ನಾವು ಪರಿಗಣಿಸುತ್ತೇವೆ.
ಬೌದ್ಧಿಕ ಆಸ್ತಿ ಉಲ್ಲಂಘನೆ
ಕೃತಿಸ್ವಾಮ್ಯ ಸೇರಿದಂತೆ, ಇನ್ನೊಬ್ಬರ ಕಾನೂನು ಹಕ್ಕುಗಳಿಗೆ ಧಕ್ಕೆ ಉಂಟುಮಾಡುವ ಯಾವುದೇ ಚಿತ್ರಗಳು ಅಥವಾ ಇತರ ವಿಷಯಗಳಿಗೆ ನಾವು ಅನುಮತಿ ನೀಡುವುದಿಲ್ಲ. ಹೆಚ್ಚಿನ ಮಾಹಿತಿಗಾಗಿ ಅಥವಾ DMCA ವಿನಂತಿಯೊಂದನ್ನು ಫೈಲ್ ಮಾಡಲು, ನಮ್ಮ ಕೃತಿಸ್ವಾಮ್ಯ ಕಾರ್ಯವಿಧಾನಗಳನ್ನು ಪರಿಶೀಲಿಸಿ.
ಅಶ್ಲೀಲ ವಿಷಯ
ನಾವು ಅಶ್ಲೀಲ ವಿಷಯವನ್ನು ಅನುಮತಿಸುವುದಿಲ್ಲ.
ಕಾನೂನುಬಾಹಿರ, ಅಪಾಯಕಾರಿ ಅಥವಾ ಹಿಂಸಾತ್ಮಕ ವಿಷಯ
ಸಾಮಾನ್ಯವಾಗಿ ಕಾನೂನುಬಾಹಿರವಾಗಿರುವ, ಅಪಾಯಕಾರಿ ಅಥವಾ ಅಪರಾಧ ಕೃತ್ಯಗಳನ್ನು ಪ್ರಚೋದಿಸುವ ಅಥವಾ ಗ್ರಾಫಿಕ್ ಅಥವಾ ಅನಪೇಕ್ಷಿತ ಹಿಂಸೆಯನ್ನು ಒಳಗೊಂಡಿರುವ ವಿಷಯವನ್ನು ನಾವು ಅನುಮತಿಸುವುದಿಲ್ಲ.
ಕಿರುಕುಳ ಮತ್ತು ಬೆದರಿಕೆಗಳು
ಇತರರಿಗೆ ಕಿರುಕುಳ ನೀಡಲು, ನಿಂದಿಸಲು ಅಥವಾ ಆಕ್ರಮಣ ಮಾಡಲು, Street View ಅನ್ನು ಬಳಸುವಂತಹ ವಿಷಯವನ್ನು ನಾವು ಅನುಮತಿಸುವುದಿಲ್ಲ.
ದ್ವೇಷಪೂರಿತ ಮಾತು
ಜನಾಂಗ, ಜನಾಂಗೀಯ ಮೂಲ, ಧರ್ಮ, ಅಂಗವೈಕಲ್ಯ, ಲಿಂಗ, ವಯಸ್ಸು, ರಾಷ್ಟ್ರೀಯತೆ, ಹಿರಿಯ ನಾಗರಿಕರ ಸ್ಥಿತಿ, ಲೈಂಗಿಕ ದೃಷ್ಟಿಕೋನ ಅಥವಾ ಲಿಂಗ ಗುರುತಿಸುವಿಕೆಯ ಆಧಾರದ ಮೇಲೆ ವ್ಯಕ್ತಿಗಳು ಅಥವಾ ಗುಂಪುಗಳ ಮೇಲಿನ ಹಿಂಸೆಯನ್ನು ಪ್ರಚೋದಿಸುವ ಅಥವಾ ಉತ್ತೇಜಿಸುವ ವಿಷಯವನ್ನು ನಾವು ಅನುಮತಿಸುವುದಿಲ್ಲ.
ಭಯೋತ್ಪಾದನೆಯ ವಿಷಯ
ನೇಮಕಾತಿಯೂ ಸೇರಿದಂತೆ, ಯಾವುದೇ ಉದ್ದೇಶಕ್ಕಾಗಿ ಈ ಸೇವೆಯನ್ನು ಬಳಸಲು ನಾವು ಭಯೋತ್ಪಾದಕ ಸಂಘಟನೆಗಳಿಗೆ ಅನುಮತಿಸುವುದಿಲ್ಲ. ಭಯೋತ್ಪಾದನೆಗೆ ಸಂಬಂಧಿಸಿದ ಅಂದರೆ ಭಯೋತ್ಪಾದಕ ಕೃತ್ಯಗಳನ್ನು ಉತ್ತೇಜಿಸುವ, ಹಿಂಸಾಚಾರವನ್ನು ಪ್ರೇರೇಪಿಸುವ ಅಥವಾ ಭಯೋತ್ಪಾದಕ ದಾಳಿಯನ್ನು ಸಂಭ್ರಮಿಸುವಂತಹ ವಿಷಯವನ್ನು ಸಹ ನಾವು ತೆಗೆದುಹಾಕುತ್ತೇವೆ.
ಮಕ್ಕಳಿಗೆ ಹಾನಿಕರವಾದ ವಿಷಯ
ಮಕ್ಕಳನ್ನು ಶೋಷಿಸುವ ಅಥವಾ ದುರುಪಯೋಗ ಮಾಡುವ ವಿಷಯಗಳ ಕುರಿತು Google ಶೂನ್ಯ-ಸಹಿಷ್ಣುತೆ ನೀತಿಯನ್ನು ಹೊಂದಿದೆ. ಎಲ್ಲಾ ಲೈಂಗಿಕ ನಿಂದನೆಯ ಇಮೇಜರಿ ಮತ್ತು ಮಕ್ಕಳನ್ನು ಲೈಂಗಿಕವಾಗಿ ಪ್ರದರ್ಶಿಸುವ ಎಲ್ಲಾ ವಿಷಯಗಳನ್ನು ಇದು ಒಳಗೊಂಡಿದೆ. ಈ ರೀತಿಯಲ್ಲಿ ಯಾವುದೇ ವಿಷಯವು ಮಕ್ಕಳನ್ನು ಶೋಷಿಸುತ್ತಿದೆ ಎಂದು ನಿಮಗೆ ಅನಿಸಿದರೆ, ಆ ವಿಷಯವನ್ನು Google ನ ಗಮನಕ್ಕೆ ತರುವ ಉದ್ದೇಶ ನಿಮಗಿದ್ದರೂ, ಅದನ್ನು ಮತ್ತೊಬ್ಬರೊಡನೆ ಹಂಚಿಕೊಳ್ಳಬೇಡಿ ಮತ್ತು ಅದಕ್ಕೆ ಪ್ರತಿಕ್ರಿಯಿಸಬೇಡಿ. ಇಂಟರ್ನೆಟ್ನಲ್ಲಿ ಬೇರೆಲ್ಲಾದರೂ ಇಂತಹ ವಿಷಯ ಕಂಡುಬಂದರೆ, ಕಾಣೆಯಾಗಿರುವ ಮತ್ತು ಶೋಷಿತ ಮಕ್ಕಳ ರಾಷ್ಟ್ರೀಯ ಕೇಂದ್ರವನ್ನು (NCMEC) ನೇರವಾಗಿ ಸಂಪರ್ಕಿಸಿ.
ವೈಯಕ್ತಿಕವಾಗಿ ಗುರುತಿಸಬಲ್ಲ ಮಾಹಿತಿ
ಕ್ರೆಡಿಟ್ ಕಾರ್ಡ್ ವಿವರಗಳು, ವೈದ್ಯಕೀಯ ದಾಖಲೆಗಳು ಅಥವಾ ಸರ್ಕಾರ ನೀಡಿರುವ ಗುರುತಿನಂತಹ ವೈಯಕ್ತಿಕವಾಗಿ ಗುರುತಿಸಬಲ್ಲ ಮಾಹಿತಿಯನ್ನು ಒಳಗೊಂಡಿರುವ ವಿಷಯವನ್ನು ನಾವು ಅನುಮತಿಸುವುದಿಲ್ಲ - ಅದು ನಿಮ್ಮದಾಗಿರಬಹುದು ಅಥವಾ ಬೇರೆಯವರದಾಗಿರಬಹುದು.