ನಾವು ಯಾವಾಗ, ಎಲ್ಲಿ ಮತ್ತು ಹೇಗೆ 360 ಚಿತ್ರಗಳನ್ನು ಸಂಗ್ರಹಿಸುತ್ತೇವೆ ಎಂಬುದನ್ನು ಅನ್ವೇಷಿಸಿ

Google ವರ್ಣರಂಜಿತ Street View ಫ್ಲೀಟ್‌ಗೆ ಭೇಟಿ ನೀಡಿ ಮತ್ತು ವಿಶ್ವದ ನಕ್ಷೆಯನ್ನು ಶಕ್ತಿಯುತಗೊಳಿಸಲು ನಾವು 360 ಚಿತ್ರಣವನ್ನು ಹೇಗೆ ಸಂಗ್ರಹಿಸುತ್ತೇವೆ ಎಂಬುದರ ಬಗ್ಗೆ ತಿಳಿಯಿರಿ.

Google Street View ಇಮೇಜರಿ ಸಂಗ್ರಹ
Google Street View ಇಮೇಜರಿ ಸಂಗ್ರಹದ ಅನಿಮೇಷನ್ ಕಾರ್

ಫೋಟೋಗಳ ಮೂಲಗಳು

Google ಮತ್ತು ನಮ್ಮ ಕೊಡುಗೆದಾರರು, ಈ ಎರಡು ಮೂಲಗಳಿಂದ Street View ಫೋಟೋಗಳು ಬರುತ್ತವೆ.

ನಮ್ಮ ವಿಷಯ
ಕೊಡುಗೆದಾರರಿಂದ ಸ್ವೀಕರಿಸಿದ ಕಂಟೆಂಟ್

ನಮ್ಮ ವಿಷಯ

Google-ಮಾಲೀಕತ್ವದ ಚಿತ್ರಣಗಳ ಕ್ರೆಡಿಟ್ “ಗಲ್ಲಿ ವೀಕ್ಷಣೆ” ಅಥವಾ “Google ನಕ್ಷೆಗಳು" ಎಂಬುದಾಗಿರುತ್ತದೆ. ನಮ್ಮ ಚಿತ್ರಣಗಳಲ್ಲಿ ಮುಖಗಳು ಮತ್ತು ಲೈಸೆನ್ಸ್ ಪ್ಲೇಟ್‍ಗಳನ್ನು ನಾವು ಸ್ವಯಂಚಾಲಿತವಾಗಿ ಮಸುಕುಗೊಳಿಸಿರುತ್ತೇವೆ.

ಕಾರ್ಯನೀತಿಗೆ ಸಂಬಂಧಿಸಿದ ವಿವರಗಳು

ಜೋರ್ಡಾನ್‌ನ ಪೆಟ್ರಾದಿಂದ Google Street View ಚಿತ್ರ

ಕೊಡುಗೆದಾರರಿಂದ ಸ್ವೀಕರಿಸಿದ ಕಂಟೆಂಟ್

ಬಳಕೆದಾರರು-ಕೊಡುಗೆ ನೀಡುವ ವಿಷಯವು ಕ್ಲಿಕ್ ಮಾಡಬಹುದಾದ/ಟ್ಯಾಪ್ ಮಾಡಬಹುದಾದ ಖಾತೆಯ ಹೆಸರು ಮತ್ತು ಕೆಲವು ಸಂದರ್ಭಗಳಲ್ಲಿ, ಪ್ರೊಫೈಲ್ ಫೋಟೋ ಸಮೇತವಾಗಿ ಬರುತ್ತದೆ.

ಕಾರ್ಯನೀತಿಗೆ ಸಂಬಂಧಿಸಿದ ವಿವರಗಳು

Street View ಗೆ ಕೊಡುಗೆ ನೀಡಿ

ಜಾಂಜಿಬಾರ್ ಅನ್ನು ಮ್ಯಾಪಿಂಗ್ ಮಾಡುವಾಗ ಫೆಡೆರಿಕೊ ಡಿಬೆಟ್ಟೊ ತೆಗೆದ Google Street View ಚಿತ್ರ

ಈ ತಿಂಗಳು ನಾವು ಎಲ್ಲಿ ಮ್ಯಾಪಿಂಗ್ ಮಾಡುತ್ತಿದ್ದೇವೆ

ನಿಮ್ಮ ಅನುಭವವನ್ನು ಹೆಚ್ಚಿಸುವ ಮತ್ತು ನಿಮ್ಮ ಸುತ್ತಲಿನ ಪ್ರಪಂಚವನ್ನು ಅನ್ವೇಷಿಸುವುದಕ್ಕಾಗಿ ನಿಮಗೆ ಸಹಾಯ ಮಾಡುವ ಚಿತ್ರಗಳನ್ನು ಒದಗಿಸಲು ನಾವು ಪ್ರಪಂಚದಾದ್ಯಂತ ಚಾಲನೆ ಮತ್ತು ಚಾರಣ ಮಾಡುತ್ತೇವೆ. ನೀವು ನಮ್ಮ ತಂಡವನ್ನು ಕರೆಯಲು ಬಯಸಿದರೆ, ಅವರು ನಿಮ್ಮ ಸಮೀಪದ ಸ್ಥಳಕ್ಕೆ ಯಾವಾಗ ಬರುತ್ತಾರೆ ಎಂಬುದನ್ನು ನೋಡಲು ಕೆಳಗೆ ಪರಿಶೀಲಿಸಿ.

ದಿನಾಂಕ ಜಿಲ್ಲೆ
ದಿನಾಂಕ ಜಿಲ್ಲೆ

ನಮ್ಮ ನಿಯಂತ್ರಣದಲ್ಲಿರದ ಅಂಶಗಳ ಕಾರಣಗಳಿಂದಾಗಿ (ಹವಾಮಾನ, ರಸ್ತೆ ಅಡೆತಡೆಗಳು, ಇತ್ಯಾದಿ) ನಮ್ಮ ಕಾರುಗಳು ಕಾರ್ಯನಿರ್ವಹಿಸದೇ ಇರುವ ಅಥವಾ ಸ್ವಲ್ಪ ಬದಲಾವಣೆಗಳು ಕಂಡುಬರುವ ಸಾಧ್ಯತೆ ಇರುತ್ತದೆ. ಪಟ್ಟಿಯು ಯಾವುದೇ ಒಂದು ಪಟ್ಟಣವನ್ನು ನಿರ್ದಿಷ್ಟಪಡಿಸುವಾಗ, ಅಲ್ಲಿಂದ ಡ್ರೈವ್ ಮಾಡುವಷ್ಟು ಅಂತರದಲ್ಲಿರುವ ಸಣ್ಣ ಪಟ್ಟಣಗಳು ಮತ್ತು ನಗರಗಳನ್ನೂ ಅದು ಒಳಗೊಂಡಿರಬಹುದು ಎನ್ನುವುದು ನಿಮಗೆ ತಿಳಿದಿರಲಿ.

ವಿಶ್ವದ ಅದ್ಭುತಗಳನ್ನು ಬಹಿರಂಗಪಡಿಸಲು ಸಿದ್ಧವಾದ ಫ್ಲೀಟ್

ನಾವು ಎಲ್ಲಾ ಏಳು ಖಂಡಗಳಲ್ಲಿ ಅದ್ಭುತ ಸ್ಥಳಗಳಿಗೆ ಭೇಟಿ ನೀಡಿದ್ದೇವೆ ಮತ್ತು ಇನ್ನಷ್ಟು ಸ್ಥಳಗಳಿಗೆ ಭೇಟಿ ನೀಡಲಿದ್ದೇವೆ. ನಾವು ರಸ್ತೆಗೆ ಬರುವ ಮೊದಲು, ಸರಿಯಾದ ಫ್ಲೀಟ್ ಅನ್ನು ನಿಯೋಜಿಸಲು ಮತ್ತು ಉತ್ತಮ ಚಿತ್ರಣವನ್ನು ಸಂಗ್ರಹಿಸಲು ಭೂಪ್ರದೇಶ, ಹವಾಮಾನ ಪರಿಸ್ಥಿತಿಗಳು ಮತ್ತು ಜನಸಂಖ್ಯಾ ಸಾಂದ್ರತೆ ಸೇರಿದಂತೆ ಹಲವು ಅಂಶಗಳನ್ನು ನಾವು ಪರಿಗಣಿಸುತ್ತೇವೆ.

Street View ಕಾರ್

ಕಾರಿನ ಮೇಲೆ ಕ್ಯಾಮರಾ ಸಿಸ್ಟಂ ಅನ್ನು ಅಳವಡಿಸಲಾಗಿದೆ, ಚಿತ್ರಗಳನ್ನು ಸಂಗ್ರಹಿಸಲು ನಾವು ಹೆಚ್ಚು ಬಳಸಿದ ಸಾಧನವೆಂದರೆ Street View ಕಾರ್ ಆಗಿದೆ ಮತ್ತು ಪ್ರಪಂಚದಾದ್ಯಂತ 10 ಮಿಲಿಯನ್ ಮೈಲುಗಳಿಗಿಂತ ಹೆಚ್ಚು ಪ್ರಯಾಣ ಮಾಡಿ ಚಿತ್ರಣಗಳನ್ನು ಸೆರೆಹಿಡಿಯಲು ನಮಗೆ ಸಹಾಯ ಮಾಡಿದೆ, ಇದರಲ್ಲಿ ಬಾಳೆಹಣ್ಣನ್ನು ತಿನ್ನುತ್ತಿರುವ ಕುದುರೆಯು ಸೇರಿದೆ.
Street View ಕಾರ್

ಟ್ರೆಕ್ಕರ್

ಈ ಪೋರ್ಟಬಲ್ ಕ್ಯಾಮರಾ ಸಿಸ್ಟಂ ಅನ್ನು ಬ್ಯಾಕ್‌ಪ್ಯಾಕ್ ರೀತಿಯಲ್ಲಿ ಬಳಸಬಹುದು ಅಥವಾ ಅದನ್ನು ಪಿಕಪ್ ಟ್ರಕ್, ಸ್ನೋಮೊಬೈಲ್ ಅಥವಾ ಮೋಟಾರ್‌ಬೈಕ್ ಮೇಲೆ ಜೋಡಿಸಬಹುದು. ಕಿರಿದಾದ ಬೀದಿಗಳಲ್ಲಿ ಅಥವಾ ನಾವು ಕಾಲ್ನಡಿಗೆಯಲ್ಲಿ ಮಾತ್ರ ತಲುಪಬಹುದಾದ ಸ್ಥಳಗಳಲ್ಲಿ ಚಿತ್ರಣವನ್ನು ಸಂಗ್ರಹಿಸಲು ಇದು ನಮಗೆ ಅನುವು ಮಾಡಿಕೊಡುತ್ತದೆ, ಉದಾಹರಣೆಗೆ ಇಂಕಾ ಸಿಟಾಡೆಲ್‌ಮಾಚು ಪಿಚು.
ಟ್ರೆಕ್ಕರ್

ನಕ್ಷೆಗಳಿಗೆ ಜೀವ ತುಂಬಲಾಗುತ್ತಿದೆ

ಚಿತ್ರಣವನ್ನು ಸಂಗ್ರಹಿಸಿದ ನಂತರ, ಅವುಗಳನ್ನು ನಿಮ್ಮ ಸ್ಕ್ರೀನ್‌ಗೆ ತಲುಪಿಸುವುದು ನಮ್ಮ ಮುಂದಿನ ಹಂತವಾಗಿದೆ. ನಮ್ಮ ತಂಡವು ತೆರೆಮರೆಯಲ್ಲಿ ಏನು ಮಾಡುತ್ತಿದೆ ಎಂಬುದರ ಕುರಿತು ಒಂದು ಕಿರುನೋಟ ಇಲ್ಲಿದೆ.

  • ಚಿತ್ರಣವನ್ನು ಸಂಗ್ರಹಿಸಲಾಗುತ್ತಿದೆ

    ಮೊದಲಿಗೆ, ನಾವು ಗಲ್ಲಿ ವೀಕ್ಷಣೆಯಲ್ಲಿ ತೋರಿಸಬೇಕೆಂದಿರುವ ಸ್ಥಳಗಳ ಸುತ್ತ-ಮುತ್ತ ಡ್ರೈವ್‌ ಮಾಡಿಕೊಂಡು ಹೋಗಬೇಕು ಮತ್ತು ನಂತರ ಆ ಸ್ಥಳಗಳ ಫೋಟೋಗಳನ್ನು ತೆಗೆಯಬೇಕಾಗುತ್ತದೆ. ಅತ್ಯುತ್ತಮ ಚಿತ್ರಣವನ್ನು ಸಂಗ್ರಹಿಸುವ ನಿಟ್ಟಿನಲ್ಲಿ, ನಾವು ಚಿತ್ರೀಕರಣವನ್ನು ಯಾವಾಗ ಮತ್ತು ಎಲ್ಲಿ ಮಾಡಬೇಕು ಎಂಬುದನ್ನು ನಿರ್ಧರಿಸಲು, ವಿವಿಧ ಸ್ಥಳಗಳ ಹವಾಮಾನ ಮತ್ತು ಜನಸಂಖ್ಯೆಯ ಸಾಂದ್ರತೆ ಸೇರಿದಂತೆ ಅನೇಕ ಅಂಶಗಳನ್ನು ನಾವು ಕೂಲಂಕಷವಾಗಿ ಪರಿಶೀಲಿಸುತ್ತೇವೆ.

  • ಚಿತ್ರಣವನ್ನು ಸಂಯೋಜಿಸಲಾಗುತ್ತಿದೆ

    ಪ್ರತಿ ಚಿತ್ರವನ್ನು ನಕ್ಷೆಯಲ್ಲಿರುವ ಅದರ ಭೌಗೋಳಿಕ ಸ್ಥಳಕ್ಕೆ ಹೊಂದಿಸಲು, GPS, ವೇಗ ಮತ್ತು ದಿಕ್ಕನ್ನು ಮಾಪನ ಮಾಡಲು ಕಾರಿ‌ನಲ್ಲಿ ಅಳವಡಿಸಲಾಗಿರುವ ಸೆನ್ಸರ್‌‌ಗಳ ಸಿಗ್ನಲ್‌ಗಳನ್ನು ನಾವು ಒಟ್ಟು ಮಾಡುತ್ತೇವೆ. ಕಾರಿನ ನಿಖರವಾದ ಮಾರ್ಗವನ್ನು ಪುನರ್ನಿರ್ಮಿಸಲು ಮತ್ತು ಅಗತ್ಯಕ್ಕೆ ತಕ್ಕಂತೆ ಚಿತ್ರಗಳನ್ನು ಓರೆಯಾಗಿಸಲು ಹಾಗೂ ಮರುಹೊಂದಿಸಲು ಇದು ನಮಗೆ ಸಹಾಯ ಮಾಡುತ್ತದೆ.

  • ಫೋಟೋಗಳನ್ನು 360 ಡಿಗ್ರಿ ಫೋಟೋಗಳನ್ನಾಗಿ ಪರಿವರ್ತಿಸಲಾಗುತ್ತಿದೆ

    360 ಡಿಗ್ರಿ ಫೋಟೋಗಳನ್ನು ತೆಗೆಯುವಾಗ ಉಂಟಾಗುವ ಅಂತರವನ್ನು ತಪ್ಪಿಸಲು, ಅಕ್ಕ-ಪಕ್ಕದಲ್ಲಿರುವ ಕ್ಯಾಮರಾಗಳು ಸ್ವಲ್ಪ ಪ್ರಮಾಣದಲ್ಲಿ ಒಂದರ ಮೇಲೆ ಇನ್ನೊಂದು ಚಿತ್ರ ಬರುವಂತೆ ಸೆರೆಹಿಡಿಯುತ್ತವೆ ಮತ್ತು ನಂತರ ನಾವು ಈ ಚಿತ್ರಗಳನ್ನು ಒಟ್ಟಿಗೆ ‘ಜೋಡಿಸಿ’ ಒಂದೇ 360 ಡಿಗ್ರಿ ಫೋಟೋವನ್ನು ಸಿದ್ಧಪಡಿಸುತ್ತೇವೆ. ನಾವು ನಂತರ ‘ಅಂಚುಗಳನ್ನು’ ಕಡಿಮೆಗೊಳಿಸಲು ಮತ್ತು ಚಿತ್ರಗಳ ನಡುವೆ ಏರುಪೇರಿಲ್ಲದಂತೆ ಸರಳವಾದ ಪರಿವರ್ತನೆಯನ್ನು ರಚಿಸಲು ವಿಶೇಷ ಚಿತ್ರ ಸಂಸ್ಕರಣೆ ಅಲ್ಗಾರಿದಮ್‌ಗಳನ್ನು ಅಳವಡಿಸುತ್ತೇವೆ.

  • ನಿಮಗೆ ಸರಿಯಾದ ಚಿತ್ರವನ್ನು ತೋರಿಸುವುದು

    ಕಾರಿನ ಲೇಸರ್‌ಗಳು ಮೇಲ್ಮೈಯಿಂದ ಎಷ್ಟು ಬೇಗನೆ ಪ್ರತಿಫಲಿಸುತ್ತವೆ ಎಂಬುದು ಕಟ್ಟಡಗಳು ಮತ್ತು ವಸ್ತುಗಳಿಗೆ ಇರುವ ಅಂತರವನ್ನು ನಮಗೆ ತಿಳಿಸುತ್ತದೆ ಮತ್ತು ಇದರಿಂದ ಪ್ರಪಂಚದ 3D ಮಾದರಿಗಳನ್ನು ರಚಿಸಲು ಸಹಾಯವಾಗುತ್ತದೆ. ನೀವು Street View ನಲ್ಲಿ ದೂರದ ಪ್ರದೇಶಕ್ಕೆ ಭೇಟಿ ನೀಡಿದಾಗ, ನಿಮಗೆ ತೋರಿಸಲು ಆ ಸ್ಥಳದ ಕುರಿತ ಯಾವ ಪನೋರಮಾ ಅತ್ಯುತ್ತಮವಾಗಿದೆ ಎಂಬುದನ್ನು ಈ ಮಾದರಿಯು ನಿರ್ಧರಿಸುತ್ತದೆ.

ನಾವು ಎಲ್ಲಿಗೆ ಭೇಟಿ ನೀಡಿದ್ದೆವು

ನಕ್ಷೆಯಲ್ಲಿರುವ ನೀಲಿ ಪ್ರದೇಶಗಳು Street View ಎಲ್ಲಿ ಲಭ್ಯವಿದೆ ಎಂಬುದನ್ನು ತೋರಿಸುತ್ತದೆ. ಇನ್ನಷ್ಟು ವಿವರವಾಗಿ ನೋಡಲು ಝೂಮ್ ಇನ್‌ ಮಾಡಿ ಅಥವಾ Google Maps ನಲ್ಲಿ ಬ್ರೌಸ್ ಮಾಡಿ.

ಇನ್ನಷ್ಟು ತಿಳಿಯಿರಿ