ಬಳಕೆದಾರರ ಮಾಹಿತಿಗೆ ಸಂಬಂಧಿಸಿದ ಸರ್ಕಾರದ ವಿನಂತಿಗಳನ್ನು Google ಹೇಗೆ ನಿರ್ವಹಿಸುತ್ತದೆ
ಜಗತ್ತಿನಾದ್ಯಂತ ಇರುವ ಸರ್ಕಾರಿ ಏಜೆನ್ಸಿಗಳು ಬಳಕೆದಾರರ ಮಾಹಿತಿಯನ್ನು ಬಹಿರಂಗಪಡಿಸುವಂತೆ Google ಗೆ ಕೇಳುತ್ತವೆ. ಪ್ರತಿ ವಿನಂತಿಯು ಅನ್ವಯವಾಗುವ ಕಾನೂನುಗಳನ್ನು ಅನುಸರಿಸುತ್ತದೆಯೆ ಎಂಬುದನ್ನು ಖಚಿತಪಡಿಸಿಕೊಳ್ಳಲು, ನಾವು ಆ ವಿನಂತಿಯನ್ನು ಎಚ್ಚರಿಕೆಯಿಂದ ಪರಿಶೀಲಿಸುತ್ತೇವೆ. ಒಂದು ವೇಳೆ ವಿನಂತಿಯು ಹೆಚ್ಚಿನ ಮಾಹಿತಿಯನ್ನು ಕೇಳಿದರೆ, ನಾವು ಅದನ್ನು ಸಂಕುಚಿತಗೊಳಿಸಲು ಪ್ರಯತ್ನಿಸುತ್ತೇವೆ ಮತ್ತು ಕೆಲವು ಸಂದರ್ಭಗಳಲ್ಲಿ ಯಾವುದೇ ಮಾಹಿತಿಯನ್ನು ನೀಡಲು ನಾವು ಆಕ್ಷೇಪಿಸುತ್ತೇವೆ. ನಮ್ಮ ಪಾರದರ್ಶಕತೆ ವರದಿಯಲ್ಲಿ ನಾವು ಸ್ವೀಕರಿಸುವ ವಿನಂತಿಗಳ ಸಂಖ್ಯೆ ಮತ್ತು ಪ್ರಕಾರಗಳನ್ನು ನಾವು ಹಂಚಿಕೊಳ್ಳುತ್ತೇವೆ.
ವಿನಂತಿಯೊಂದಕ್ಕೆ ನಾವು ಪ್ರತಿಕ್ರಿಯಿಸುವ ರೀತಿಯು ನಿಮ್ಮ Google ಸೇವಾ ಪೂರೈಕೆದಾರರ ಮೇಲೆ ಅವಲಂಬಿತವಾಗಿರುತ್ತದೆ — ನಮ್ಮ ಹೆಚ್ಚಿನ ಸೇವೆಗಳು Google LLC, ಅಮೆರಿಕಾದ ಕಾನೂನಿನಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಅಮೆರಿಕಾದ ಕಂಪನಿ ಅಥವಾ Google Ireland Limited, ಐರಿಶ್ ಕಾನೂನಿನಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಐರಿಶ್ ಕಂಪನಿಗೆ ಸಂಬಂಧಿಸಿವೆ. ನಿಮ್ಮ ಸೇವಾ ಪೂರೈಕೆದಾರರು ಯಾರೆಂಬುದನ್ನು ಕಂಡುಕೊಳ್ಳಲು, Google ನ ಸೇವಾ ನಿಯಮಗಳನ್ನು ಪರಿಶೀಲಿಸಿ ಅಥವಾ ಸಂಸ್ಥೆಯೊಂದು ನಿಮ್ಮ Google ಖಾತೆಯನ್ನು ನಿರ್ವಹಿಸುತ್ತಿದ್ದರೆ ನಿಮ್ಮ ಖಾತೆಯ ನಿರ್ವಾಹಕರನ್ನು ಕೇಳಿ.
ಸರ್ಕಾರಿ ಏಜೆನ್ಸಿಯಿಂದ ವಿನಂತಿಯೊಂದನ್ನು ಸ್ವೀಕರಿಸಿದಾಗ, ಮಾಹಿತಿಯನ್ನು ಬಹಿರಂಗಪಡಿಸುವ ಮೊದಲು ಬಳಕೆದಾರರ ಖಾತೆಗೆ ನಾವು ಇಮೇಲ್ ಅನ್ನು ಕಳುಹಿಸುತ್ತೇವೆ. ಸಂಸ್ಥೆಯೊಂದು ಖಾತೆಯನ್ನು ನಿರ್ವಹಿಸುತ್ತಿದ್ದರೆ, ಖಾತೆಯ ನಿರ್ವಾಹಕರಿಗೆ ನಾವು ಸೂಚನೆಯನ್ನು ನೀಡುತ್ತೇವೆ.
ವಿನಂತಿಯ ನಿಯಮಗಳ ಅಡಿಯಲ್ಲಿ ಕಾನೂನುಬದ್ಧವಾಗಿ ನಿಷೇಧಿಸಿದಾಗ ನಾವು ಸೂಚನೆ ನೀಡುವುದಿಲ್ಲ. ಕಾನೂನುಬದ್ಧ ನಿಷೇಧವನ್ನು ತೆಗೆದುಹಾಕಿದ ನಂತರ, ಅಂದರೆ ಶಾಸನಬದ್ಧ ಅಥವಾ ನ್ಯಾಯಾಲಯದ ಆದೇಶದ ವಂಚನೆಯ ಅವಧಿ ಮುಗಿದ ನಂತರ ನಾವು ಸೂಚನೆ ನೀಡುತ್ತೇವೆ.
ಖಾತೆಯನ್ನು ನಿಷ್ಕ್ರಿಯಗೊಳಿಸಿದ್ದರೆ ಅಥವಾ ಹೈಜಾಕ್ ಮಾಡಿದ್ದರೆ ನಾವು ಸೂಚನೆಯನ್ನು ನೀಡದಿರಬಹುದು. ಮಗುವಿನ ಸುರಕ್ಷತೆಗೆ ಸಂಬಂಧಿಸಿದ ಬೆದರಿಕೆಗಳು ಅಥವಾ ಬೇರೊಬ್ಬರ ಜೀವಕ್ಕೆ ಸಂಬಂಧಿಸಿದ ಬೆದರಿಕೆಗಳಂತಹ ತುರ್ತು ಪರಿಸ್ಥಿತಿಗಳ ಸಂದರ್ಭಗಳಲ್ಲಿ ನಾವು ಸೂಚನೆ ನೀಡದಿರಬಹುದು, ತುರ್ತು ಪರಿಸ್ಥಿತಿ ಮುಗಿದಿದೆ ಎಂದು ನಮಗೆ ತಿಳಿದುಬಂದರೆ ನಾವು ಸೂಚನೆ ನೀಡುತ್ತೇವೆ.
ನಾಗರಿಕ, ಆಡಳಿತಾತ್ಮಕ ಮತ್ತು ಅಪರಾಧ ಪ್ರಕರಣಗಳಿಗೆ ಸಂಬಂಧಿಸಿದಂತೆ ಅಮೆರಿಕಾದ ಸರ್ಕಾರಿ ಏಜೆನ್ಸಿಗಳು ಸಲ್ಲಿಸಿದ ವಿನಂತಿಗಳು
ಅಮೆರಿಕಾ ಸಂವಿಧಾನದ ನಾಲ್ಕನೇ ತಿದ್ದುಪಡಿ ಮತ್ತು ಎಲೆಕ್ಟ್ರಾನಿಕ್ ಸಂವಹನಗಳ ಗೌಪ್ಯತೆ ಕಾಯ್ದೆಯು (ECPA) ಬಳಕೆದಾರರ ಮಾಹಿತಿಯನ್ನು ಬಹಿರಂಗಪಡಿಸುವಂತೆ ಪೂರೈಕೆದಾರರನ್ನು ಒತ್ತಾಯಿಸುವ ಸರ್ಕಾರದ ಸಾಮರ್ಥ್ಯವನ್ನು ನಿರ್ಬಂಧಿಸುತ್ತದೆ. ಅಮೆರಿಕಾದ ಅಧಿಕಾರಿಗಳು ಕನಿಷ್ಠ ಈ ಕೆಳಗಿನವುಗಳನ್ನು ಮಾಡಬೇಕು:
- ಎಲ್ಲಾ ಪ್ರಕರಣಗಳಲ್ಲಿ: ಮೂಲ ಸಬ್ಸ್ಕ್ರೈಬರ್ ನೋಂದಣಿ ಮಾಹಿತಿ ಮತ್ತು ಕೆಲವು ಐಪಿ ವಿಳಾಸಗಳನ್ನು ಬಹಿರಂಗಪಡಿಸುವಂತೆ ಒತ್ತಾಯಿಸಲು ಸಪೀನಾ ಮೂಲಕ ಸಮನ್ ನೀಡಿ
- ಅಪರಾಧ ಪ್ರಕರಣಗಳಲ್ಲಿ
- ಇಮೇಲ್ಗಳಲ್ಲಿನ 'ಗೆ, ಇಂದ, CC, BCC ಮತ್ತು ಟೈಮ್ಸ್ಟ್ಯಾಂಪ್ ಫೀಲ್ಡ್ಗಳಂತಹ' ವಿಷಯೇತರ ದಾಖಲೆಗಳನ್ನು ಬಹಿರಂಗಪಡಿಸುವಂತೆ ಒತ್ತಾಯಿಸಲು ನ್ಯಾಯಾಲಯದ ಆದೇಶವನ್ನು ಪಡೆಯಿರಿ
- ಇಮೇಲ್ ಸಂದೇಶಗಳು, ಡಾಕ್ಯುಮೆಂಟ್ಗಳು ಮತ್ತು ಫೋಟೋಗಳಂತಹ ಸಂವಹನಗಳ ವಿಷಯದ ಕುರಿತು ಬಹಿರಂಗಪಡಿಸುವಂತೆ ಒತ್ತಾಯಿಸಲು ಶೋಧನಾ ಅಧಿಕಾರಪತ್ರ ಪಡೆಯಿರಿ
ರಾಷ್ಟ್ರೀಯ ಭದ್ರತೆಯನ್ನು ಒಳಗೊಂಡಿರುವ ಪ್ರಕರಣಗಳಿಗೆ ಸಂಬಂಧಿಸಿದಂತೆ ಅಮೆರಿಕಾದ ಸರ್ಕಾರಿ ಏಜೆನ್ಸಿಗಳು ಸಲ್ಲಿಸಿದ ವಿನಂತಿಗಳು
ರಾಷ್ಟ್ರೀಯ ಭದ್ರತೆಗೆ ಸಂಬಂಧಿಸಿದ ತನಿಖೆಗಳಲ್ಲಿ, ಬಳಕೆದಾರರ ಮಾಹಿತಿಯನ್ನು ಒದಗಿಸುವಂತೆ Google ಗೆ ಒತ್ತಾಯಿಸಲು, ಅಮೆರಿಕಾದ ಸರ್ಕಾರವು ರಾಷ್ಟ್ರೀಯ ಭದ್ರತಾ ಪತ್ರವನ್ನು (NSL) ಅಥವಾ ವಿದೇಶಿ ಗುಪ್ತಚರ ಕಣ್ಗಾವಲು ಕಾಯ್ದೆ (FISA) ಅಡಿಯಲ್ಲಿ ನೀಡಲಾದ ಅಧಿಕಾರಗಳಲ್ಲೊಂದನ್ನು ಬಳಸಬಹುದು.
- NSL ಗೆ ನ್ಯಾಯಾಂಗ ದೃಢೀಕರಣದ ಅಗತ್ಯವಿಲ್ಲ ಮತ್ತು ಸೀಮಿತ ಸಬ್ಸ್ಕ್ರೈಬರ್ ಮಾಹಿತಿಯನ್ನು ಒದಗಿಸುವಂತೆ ನಮ್ಮನ್ನು ಒತ್ತಾಯಿಸಲು ಮಾತ್ರ ಇದನ್ನು ಬಳಸಬಹುದು.
- ಎಲೆಕ್ಟ್ರಾನಿಕ್ ಕಣ್ಗಾವಲನ್ನು ಮತ್ತು Gmail, ಡ್ರೈವ್ ಮತ್ತು ಫೋಟೋಗಳಂತಹ ಸೇವೆಗಳಲ್ಲಿನ ವಿಷಯವನ್ನು ಒಳಗೊಂಡಂತೆ ಸಂಗ್ರಹಿಸಿದ ಡೇಟಾವನ್ನು ಬಹಿರಂಗಪಡಿಸುವಂತೆ ಒತ್ತಾಯಿಸಲು FISA ಆದೇಶಗಳನ್ನು ಮತ್ತು ದೃಢೀಕರಣಗಳನ್ನು ಬಳಸಬಹುದು.
ಅಮೆರಿಕಾದ ಹೊರಗಿನ ಸರ್ಕಾರಿ ಅಧಿಕಾರಿಗಳು ಸಲ್ಲಿಸಿದ ವಿನಂತಿಗಳು
Google LLC ಕೆಲವೊಮ್ಮೆ ಅಮೆರಿಕಾದ ಹೊರಗಿನ ಸರ್ಕಾರಿ ಅಧಿಕಾರಿಗಳಿಂದ ಡೇಟಾ ಬಹಿರಂಗಪಡಿಸುವಿಕೆಯ ಕುರಿತಾದ ವಿನಂತಿಗಳನ್ನು ಸ್ವೀಕರಿಸುತ್ತದೆ. ಈ ವಿನಂತಿಗಳನ್ನು ನಾವು ಸ್ವೀಕರಿಸಿದಾಗ, ಈ ಕೆಳಗಿನವುಗಳಿಗೆ ಅನುಗುಣವಾಗಿ ನಾವು ಬಳಕೆದಾರರ ಮಾಹಿತಿಯನ್ನು ಒದಗಿಸಬಹುದು:
- ಅಮೆರಿಕಾದ ಕಾನೂನು, ಅಂದರೆ ಎಲೆಕ್ಟ್ರಾನಿಕ್ ಸಂವಹನಗಳ ಗೌಪ್ಯತೆ ಕಾಯ್ದೆಯಂತಹ (ECPA) ಅನ್ವಯವಾಗುವ ಅಮೆರಿಕಾದ ಕಾನೂನಿನ ಅಡಿಯಲ್ಲಿ ಆ್ಯಕ್ಸೆಸ್ ಮತ್ತು ಬಹಿರಂಗಪಡಿಸುವಿಕೆಯನ್ನು ಅನುಮತಿಸಲಾಗಿದೆ
- ವಿನಂತಿಸುವ ದೇಶದ ಕಾನೂನು, ಅಂದರೆ ಅದೇ ತರಹದ ಸೇವೆಯನ್ನು ಒದಗಿಸುವ ಸ್ಥಳೀಯ ಪೂರೈಕೆದಾರರಿಗೆ ವಿನಂತಿಯನ್ನು ಸಲ್ಲಿಸಿದರೆ ಅನ್ವಯವಾಗುವ ಒಂದೇ ರೀತಿಯ ಪ್ರಕ್ರಿಯೆ ಮತ್ತು ಕಾನೂನು ಅವಶ್ಯಕತೆಗಳನ್ನು ಅನುಸರಿಸಲು ನಮಗೆ ಅಧಿಕಾರಬೇಕು
- ಅಂತರರಾಷ್ಟ್ರೀಯ ಮಾನದಂಡಗಳು, ಅಂದರೆ ಜಾಗತಿಕ ನೆಟ್ವರ್ಕ್ ನೇತೃತ್ವದ ಅಭಿವ್ಯಕ್ತಿ ಸ್ವಾತಂತ್ರ್ಯ ಮತ್ತು ಗೌಪ್ಯತೆಯ ಕುರಿತಾದ ತತ್ವಗಳು ಮತ್ತು ಅದಕ್ಕೆ ಸಂಬಂಧಿಸಿದ ಅನುಷ್ಠಾನ ಮಾರ್ಗಸೂಚಿಗಳನ್ನು ಪೂರೈಸುವ ವಿನಂತಿಗಳಿಗೆ ಪ್ರತಿಕ್ರಿಯೆಯಾಗಿ ಮಾತ್ರ ನಾವು ಡೇಟಾವನ್ನು ಒದಗಿಸುತ್ತೇವೆ
- Google ನ ಕಾರ್ಯನೀತಿಗಳು, ಇವುಗಳು ಅನ್ವಯವಾಗುವ ಯಾವುದೇ ಸೇವಾ ನಿಯಮಗಳು ಮತ್ತು ಗೌಪ್ಯತೆ ನೀತಿಗಳು ಹಾಗೂ ಅಭಿವ್ಯಕ್ತಿ ಸ್ವಾತಂತ್ರ್ಯದ ರಕ್ಷಣೆಗೆ ಸಂಬಂಧಿಸಿದ ನೀತಿಗಳನ್ನು ಒಳಗೊಂಡಿರುತ್ತದೆ
ಏಕೆಂದರೆ Google Ireland, ಯುರೋಪಿಯನ್ ವಾಣಿಜ್ಯ ಪ್ರದೇಶ ಮತ್ತು ಸ್ವಿಟ್ಜರ್ಲ್ಯಾಂಡ್ನಲ್ಲಿನ ಹೆಚ್ಚಿನ Google ಸೇವೆಗಳನ್ನು ಒದಗಿಸುವ ಜವಾಬ್ದಾರಿಯನ್ನು ಹೊಂದಿದೆ, ಇದು ಸಹ ಬಳಕೆದಾರರ ಮಾಹಿತಿಗಾಗಿ ವಿನಂತಿಗಳನ್ನು ಸ್ವೀಕರಿಸುತ್ತದೆ.
ಐರಿಶ್ ಸರ್ಕಾರಿ ಏಜೆನ್ಸಿಗಳು ಸಲ್ಲಿಸಿದ ವಿನಂತಿಗಳು
ಐರಿಶ್ ಏಜೆನ್ಸಿಯೊಂದು ಬಳಕೆದಾರರ ಮಾಹಿತಿಗೆ ಸಂಬಂಧಿಸಿದ ವಿನಂತಿಗಳನ್ನು ಮೌಲ್ಯಮಾಪನ ಮಾಡುವಾಗ Google Ireland ಐರಿಶ್ ಕಾನೂನನ್ನು ಪರಿಗಣಿಸುತ್ತದೆ. ಐರಿಶ್ ಕಾನೂನಿನ ಪ್ರಕಾರ, ಬಳಕೆದಾರರ ಮಾಹಿತಿಯನ್ನು ಒದಗಿಸುವಂತೆ Google Ireland ಗೆ ಒತ್ತಾಯಿಸಲು, ಐರಿಶ್ ಕಾನೂನು ಜಾರಿ ಅಧಿಕಾರಿಗಳು ನ್ಯಾಯಾಂಗದ ಅಧಿಕೃತ ಆದೇಶವನ್ನು ಪಡೆಯಬೇಕು.
ಐರ್ಲೆಂಡ್ನ ಹೊರಗಿನ ಸರ್ಕಾರಿ ಅಧಿಕಾರಿಗಳು ಸಲ್ಲಿಸಿದ ವಿನಂತಿಗಳು
Google Ireland, ಯುರೋಪಿಯನ್ ವಾಣಿಜ್ಯ ಪ್ರದೇಶ ಮತ್ತು ಸ್ವಿಟ್ಜರ್ಲ್ಯಾಂಡ್ನಾದ್ಯಂತ ಇರುವ ಬಳಕೆದಾರರಿಗೆ ಸೇವೆಗಳನ್ನು ಒದಗಿಸುತ್ತದೆ ಮತ್ತು ನಾವು ಕೆಲವೊಮ್ಮೆ ಐರ್ಲೆಂಡ್ನ ಹೊರಗಿನ ಸರ್ಕಾರಿ ಅಧಿಕಾರಿಗಳಿಂದ ಡೇಟಾ ಬಹಿರಂಗಪಡಿಸುವಿಕೆಯ ಕುರಿತಾದ ವಿನಂತಿಗಳನ್ನು ಸ್ವೀಕರಿಸುತ್ತದೆ. ಇಂತಹ ಸಂದರ್ಭದಲ್ಲಿ, ಈ ಕೆಳಗಿನವುಗಳಿಗೆ ಅನುಗುಣವಾಗಿ ನಾವು ಬಳಕೆದಾರರ ಡೇಟಾವನ್ನು ಒದಗಿಸಬಹುದು:
- ಐರಿಶ್ ಕಾನೂನು, ಅಂದರೆ ಐರಿಶ್ ಅಪರಾಧ ನ್ಯಾಯ ಕಾಯ್ದೆಯಂತಹ ಅನ್ವಯವಾಗುವ ಐರಿಶ್ ಕಾನೂನಿನ ಅಡಿಯಲ್ಲಿ ಆ್ಯಕ್ಸೆಸ್ ಮತ್ತು ಬಹಿರಂಗಪಡಿಸುವಿಕೆಯನ್ನು ಅನುಮತಿಸಲಾಗಿದೆ
- ಐರ್ಲೆಂಡ್ನಲ್ಲಿ ಅನ್ವಯವಾಗುವ ಯುರೋಪಿಯನ್ ಯೂನಿಯನ್ (EU) ಕಾನೂನು, ಅಂದರೆ ಸಾಮಾನ್ಯ ಡೇಟಾ ಸಂರಕ್ಷಣಾ ನಿಯಮ (GDPR) ಸೇರಿದಂತೆ ಐರ್ಲೆಂಡ್ನಲ್ಲಿ ಅನ್ವಯವಾಗುವ ಯಾವುದೇ EU ಕಾನೂನುಗಳು
- ವಿನಂತಿಸುವ ದೇಶದ ಕಾನೂನು, ಅಂದರೆ ಅದೇ ತರಹದ ಸೇವೆಯನ್ನು ಒದಗಿಸುವ ಸ್ಥಳೀಯ ಪೂರೈಕೆದಾರರಿಗೆ ವಿನಂತಿಯನ್ನು ಸಲ್ಲಿಸಿದರೆ ಅನ್ವಯವಾಗುವ ಒಂದೇ ರೀತಿಯ ಪ್ರಕ್ರಿಯೆ ಮತ್ತು ಕಾನೂನು ಅವಶ್ಯಕತೆಗಳನ್ನು ಅನುಸರಿಸಲು ನಮಗೆ ಅಧಿಕಾರಬೇಕು
- ಅಂತರರಾಷ್ಟ್ರೀಯ ಮಾನದಂಡಗಳು, ಅಂದರೆ ಜಾಗತಿಕ ನೆಟ್ವರ್ಕ್ ನೇತೃತ್ವದ ಅಭಿವ್ಯಕ್ತಿ ಸ್ವಾತಂತ್ರ್ಯ ಮತ್ತು ಗೌಪ್ಯತೆಯ ಕುರಿತಾದ ತತ್ವಗಳು ಮತ್ತು ಅದಕ್ಕೆ ಸಂಬಂಧಿಸಿದ ಅನುಷ್ಠಾನ ಮಾರ್ಗಸೂಚಿಗಳನ್ನು ಪೂರೈಸುವ ವಿನಂತಿಗಳಿಗೆ ಪ್ರತಿಕ್ರಿಯೆಯಾಗಿ ಮಾತ್ರ ನಾವು ಡೇಟಾವನ್ನು ಒದಗಿಸುತ್ತೇವೆ
- Google ನ ಕಾರ್ಯನೀತಿಗಳು, ಇವುಗಳು ಅನ್ವಯವಾಗುವ ಯಾವುದೇ ಸೇವಾ ನಿಯಮಗಳು ಮತ್ತು ಗೌಪ್ಯತೆ ನೀತಿಗಳು ಹಾಗೂ ಅಭಿವ್ಯಕ್ತಿ ಸ್ವಾತಂತ್ರ್ಯದ ರಕ್ಷಣೆಗೆ ಸಂಬಂಧಿಸಿದ ನೀತಿಗಳನ್ನು ಒಳಗೊಂಡಿರುತ್ತದೆ
ಯಾರಾದರೂ ಸಾಯುವುದನ್ನು ಅಥವಾ ಗಂಭೀರವಾದ ದೈಹಿಕ ತೊಂದರೆ ಅನುಭವಿಸುವುದನ್ನು ನಾವು ತಡೆಯಬಹುದು ಎಂದು ನಮಗೆ ಅನಿಸಿದರೆ, ನಾವು ಸರ್ಕಾರಿ ಏಜೆನ್ಸಿಗೆ ಮಾಹಿತಿಯನ್ನು ಒದಗಿಸಬಹುದು - ಉದಾಹರಣೆಗೆ, ಬಾಂಬ್ ಬೆದರಿಕೆಗಳು, ಶಾಲೆಯ ಮೇಲಿನ ಗುಂಡಿನ ದಾಳಿ, ಅಪಹರಣಗಳು, ಆತ್ಮಹತ್ಯೆ ತಡೆಗಟ್ಟುವಿಕೆ ಮತ್ತು ಕಾಣೆಯಾದ ವ್ಯಕ್ತಿಗಳ ಪ್ರಕರಣಗಳು. ಅನ್ವಯವಾಗುವ ಕಾನೂನುಗಳು ಮತ್ತು ನಮ್ಮ ಕಾರ್ಯನೀತಿಗಳನ್ನು ಸಡಿಲಿಸಿಕೊಂಡಾದರೂ ನಾವು ಈ ವಿನಂತಿಗಳನ್ನು ಪರಿಗಣಿಸುತ್ತೇವೆ.