Google ಕುಕೀಗಳನ್ನು ಹೇಗೆ ಬಳಸುತ್ತದೆ
ಈ ಪುಟವು Google ಬಳಸುವ ಕುಕೀಗಳು ಮತ್ತು ಅಂತಹುದೇ ತಂತ್ರಜ್ಞಾನಗಳ ಪ್ರಕಾರಗಳನ್ನು ವಿವರಿಸುತ್ತದೆ. Google ಮತ್ತು ನಮ್ಮ ಪಾಲುದಾರರು ಅಡ್ವರ್ಟೈಸಿಂಗ್‌ನಲ್ಲಿನ ಕುಕೀಗಳನ್ನು ಹೇಗೆ ಬಳಸುತ್ತಾರೆ ಎಂಬುದನ್ನು ಸಹ ಇದು ವಿವರಿಸುತ್ತದೆ.
ಕುಕೀಗಳು ಎಂದರೆ, ನೀವು ಭೇಟಿ ನೀಡಿದ ವೆಬ್‌ಸೈಟ್‌ನ ಮೂಲಕ ನಿಮ್ಮ ಬ್ರೌಸರ್‌ಗೆ ಕಳುಹಿಸಲಾಗುವ ಪಠ್ಯದ ಸಣ್ಣ ಭಾಗಗಳಾಗಿವೆ. ನಿಮ್ಮ ಭೇಟಿಯ ಕುರಿತಾದ ಮಾಹಿತಿಯನ್ನು ನೆನಪಿಟ್ಟುಕೊಳ್ಳಲು ಕುಕೀಗಳು ವೆಬ್‌ಸೈಟ್‌ಗೆ ಸಹಾಯ ಮಾಡುತ್ತವೆ, ಇವುಗಳು ಸೈಟ್‌ಗೆ ಪುನಃ ಭೇಟಿ ನೀಡುವುದನ್ನು ಸುಲಭಗೊಳಿಸುತ್ತವೆ ಮತ್ತು ಸೈಟ್ ಅನ್ನು ನಿಮಗೆ ಇನ್ನಷ್ಟು ಉಪಯುಕ್ತವಾಗುವಂತೆ ಮಾಡುತ್ತವೆ. ಆ್ಯಪ್ ಅಥವಾ ಸಾಧನ, ಪಿಕ್ಸೆಲ್ ಟ್ಯಾಗ್‌ಗಳು ಮತ್ತು ಸ್ಥಳೀಯ ಸಂಗ್ರಹಣೆಯನ್ನು ಗುರುತಿಸಲು ಬಳಸಲಾಗುವ ಅನನ್ಯವಾಗಿ ಗುರುತಿಸಬಲ್ಲವು ಸೇರಿದಂತೆ, ಅಂತಹುದೇ ತಂತ್ರಜ್ಞಾನಗಳು ಅದೇ ಕಾರ್ಯವನ್ನು ನಿರ್ವಹಿಸಬಹುದು. ಈ ಪುಟದಲ್ಲಿ ವಿವರಿಸಿದಂತೆ ಕುಕೀಗಳು ಮತ್ತು ಅಂತಹುದೇ ತಂತ್ರಜ್ಞಾನಗಳನ್ನು ಕೆಳಗೆ ವಿವರಿಸಲಾದ ಉದ್ದೇಶಗಳಿಗಾಗಿ ಬಳಸಬಹುದು.
ನಾವು ಕುಕೀಗಳು ಮತ್ತು ಇತರ ಮಾಹಿತಿಯನ್ನು ಬಳಸುವಾಗ ನಿಮ್ಮ ಗೌಪ್ಯತೆಯನ್ನು ಹೇಗೆ ರಕ್ಷಿಸುತ್ತೇವೆ ಎಂಬುದನ್ನು ತಿಳಿದುಕೊಳ್ಳಲು ಗೌಪ್ಯತೆ ನೀತಿಯನ್ನು ನೋಡಿ.
Google ಬಳಸುವ ಕುಕೀಗಳ ಪ್ರಕಾರಗಳು ಮತ್ತು ಅಂತಹುದೇ ತಂತ್ರಜ್ಞಾನಗಳು
ಕೆಳಗೆ ವಿವರಿಸಿದ ಕೆಲವು ಅಥವಾ ಎಲ್ಲಾ ಕುಕೀಗಳು ಅಥವಾ ಅಂತಹುದೇ ತಂತ್ರಜ್ಞಾನಗಳನ್ನು ನಿಮ್ಮ ಬ್ರೌಸರ್, ಆ್ಯಪ್ ಅಥವಾ ಸಾಧನದಲ್ಲಿ ಸಂಗ್ರಹಿಸಬಹುದು. ಕೆಲವು ಕುಕೀಗಳ ಬಳಕೆಯನ್ನು ತಿರಸ್ಕರಿಸುವುದು ಸೇರಿದಂತೆ ಕುಕೀಗಳನ್ನು ಹೇಗೆ ಬಳಸಲಾಗುತ್ತದೆ ಎಂಬುದನ್ನು ನಿರ್ವಹಿಸಲು, ನೀವು g.co/privacytools ಗೆ ಭೇಟಿ ನೀಡಬಹುದು. ನಿಮ್ಮ ಬ್ರೌಸರ್‌ನಲ್ಲಿ ನೀವು ಕುಕೀಗಳನ್ನು ಸಹ ನಿರ್ವಹಿಸಬಹುದು (ಮೊಬೈಲ್ ಸಾಧನಗಳಿಗೆ ಸಂಬಂಧಿಸಿದಂತೆ ಬ್ರೌಸರ್‌ಗಳು ಈ ಗೋಚರತೆಯನ್ನು ನೀಡದಿರಬಹುದು). ಈ ಕೆಲವು ತಂತ್ರಜ್ಞಾನಗಳನ್ನು ನಿಮ್ಮ ಸಾಧನದ ಸೆಟ್ಟಿಂಗ್‌ಗಳಲ್ಲಿ ಅಥವಾ ಆ್ಯಪ್‌ನ ಸೆಟ್ಟಿಂಗ್‌ಗಳಲ್ಲಿ ನಿರ್ವಹಿಸಬಹುದು.
ಕಾರ್ಯಚಟುವಟಿಕೆ
ಕಾರ್ಯಚಟುವಟಿಕೆಗಾಗಿ ಬಳಸಲ್ಪಡುವ ಕುಕೀಗಳು ಮತ್ತು ಅಂತಹುದೇ ತಂತ್ರಜ್ಞಾನಗಳು ಸೇವೆಗೆ ಮೂಲಭೂತವಾಗಿರುವ ಫೀಚರ್‌ಗಳನ್ನು ಆ್ಯಕ್ಸೆಸ್ ಮಾಡಲು ನಿಮಗೆ ಅನುವು ಮಾಡಿಕೊಡುತ್ತವೆ. ಸೇವೆಗೆ ಮೂಲಭೂತವಾದವು ಎಂದು ಪರಿಗಣಿಸಲ್ಪಡುವ ಸಂಗತಿಗಳು, ನೀವು ಆಯ್ಕೆಮಾಡುವ ಭಾಷೆ; ಶಾಪಿಂಗ್ ಕಾರ್ಟ್‌ನಲ್ಲಿರುವ ಕಂಟೆಂಟ್‌ನಂತಹ ನಿಮ್ಮ ಸೆಶನ್‌ಗೆ ಸಂಬಂಧಿಸಿದ ಮಾಹಿತಿಯನ್ನು ಸಂಗ್ರಹಿಸುವುದು; ನೀವು ವಿನಂತಿಸಿದ ಫೀಚರ್‌ಗಳನ್ನು ಸಕ್ರಿಯಗೊಳಿಸುವುದು ಅಥವಾ ಕಾರ್ಯಗಳನ್ನು ನಿರ್ವಹಿಸುವುದು; ಮತ್ತು ಆ ಸೇವೆಯನ್ನು ನಿರ್ವಹಿಸಲು ಮತ್ತು ಸುಧಾರಿಸಲು ಸಹಾಯ ಮಾಡುವ ಉತ್ಪನ್ನದ ಆಪ್ಟಿಮೈಸೇಶನ್‌ಗಳಂತಹ ಆಯ್ಕೆಗಳನ್ನು ಮತ್ತು ಆದ್ಯತೆಗಳನ್ನು ನೆನಪಿಟ್ಟುಕೊಳ್ಳುವುದು ಒಳಗೊಂಡಿರುತ್ತವೆ.
ನಿಮ್ಮ ಆದ್ಯತೆಗಳನ್ನು ನಿರ್ವಹಿಸಲು ಕೆಲವು ಕುಕೀಗಳು ಹಾಗೂ ಅಂತಹುದೇ ತಂತ್ರಜ್ಞಾನಗಳನ್ನು ಬಳಸಲಾಗುತ್ತದೆ. ಉದಾಹರಣೆಗೆ, Google ಸೇವೆಗಳನ್ನು ಬಳಸುವ ಹೆಚ್ಚಿನ ಜನರು ತಮ್ಮ ಕುಕೀಗಳ ಆಯ್ಕೆಗಳನ್ನು ಆಧರಿಸಿ, ತಮ್ಮ ಬ್ರೌಸರ್‌ಗಳಲ್ಲಿ 'NID' ಅಥವಾ ‘_Secure-ENID’ ಎಂಬ ಕುಕೀಯನ್ನು ಹೊಂದಿರುತ್ತಾರೆ. ನಿಮ್ಮ ಆದ್ಯತೆಯ ಭಾಷೆ, ಪ್ರತಿ ಹುಡುಕಾಟ ಪುಟದಲ್ಲಿ ಎಷ್ಟು ಫಲಿತಾಂಶಗಳನ್ನು ತೋರಿಸಬೇಕೆಂದು ನೀವು ಬಯಸುತ್ತೀರಿ (ಉದಾಹರಣೆಗೆ, 10 ಅಥವಾ 20) ಮತ್ತು ನೀವು Google ನ ಸುರಕ್ಷಿತ ಹುಡುಕಾಟ ಫಿಲ್ಟರ್ ಅನ್ನು ಆನ್ ಮಾಡಬೇಕೆಂದು ಬಯಸುತ್ತೀರೋ ಅಥವಾ ಇಲ್ಲವೋ ಎಂಬಂತಹ ನಿಮ್ಮ ಆದ್ಯತೆಗಳು ಹಾಗೂ ಇತರ ಮಾಹಿತಿಯನ್ನು ನೆನಪಿಟ್ಟುಕೊಳ್ಳಲು ಈ ಕುಕೀಗಳನ್ನು ಬಳಸಲಾಗುತ್ತದೆ. ಪ್ರತಿ 'NID' ಕುಕೀಯು, ಬಳಕೆದಾರರು ಕೊನೆಯದಾಗಿ ಬಳಸಿದ ದಿನಾಂಕದಿಂದ 6 ತಿಂಗಳ ಬಳಿಕ ಇದರ ಅವಧಿ ಮುಕ್ತಾಯವಾಗುತ್ತದೆ, ಆದರೆ ‘_Secure-ENID’ ಕುಕೀಯು 13 ತಿಂಗಳುಗಳವರೆಗೆ ಇರುತ್ತದೆ. ‘VISITOR_INFO1_LIVE’ ಮತ್ತು ‘__Secure-YEC’ ಹೆಸರಿನ ಕುಕೀಗಳು YouTube ಗಾಗಿ ಒಂದೇ ರೀತಿಯ ಉದ್ದೇಶವನ್ನು ಪೂರೈಸುತ್ತವೆ, ಹಾಗೆಯೇ ಸೇವೆಯ ಜೊತೆಗಿನ ಸಮಸ್ಯೆಗಳನ್ನು ಪತ್ತೆಹಚ್ಚಲು ಮತ್ತು ಪರಿಹರಿಸಲು ಸಹ ಅವುಗಳನ್ನು ಬಳಸಲಾಗುತ್ತದೆ. ಈ ಕುಕೀಗಳು ಕ್ರಮವಾಗಿ 6 ತಿಂಗಳು ಮತ್ತು 13 ತಿಂಗಳುಗಳವರೆಗೆ ಇರುತ್ತದೆ.
ನಿರ್ದಿಷ್ಟ ಸೆಶನ್‌ನಲ್ಲಿ ನಿಮ್ಮ ಅನುಭವವನ್ನು ನಿರ್ವಹಿಸಲು ಮತ್ತು ವೃದ್ಧಿಸಲು ಇತರ ಕುಕೀಗಳು ಮತ್ತು ಅಂತಹುದೇ ತಂತ್ರಜ್ಞಾನಗಳನ್ನು ಬಳಸಲಾಗುತ್ತದೆ. ಉದಾಹರಣೆಗೆ, ನಿಮ್ಮ ಆದ್ಯತೆಯ ಪುಟದ ಕಾನ್ಫಿಗರೇಶನ್ ಹಾಗೂ ಪ್ಲೇಬ್ಯಾಕ್ ಆದ್ಯತೆಗಳಾಗಿರುವ ಸ್ಪಷ್ಟ ಆಟೋಪ್ಲೇ ಆಯ್ಕೆಗಳು, ಕಂಟೆಂಟ್ ಶಫಲ್ ಮಾಡುವುದು ಮತ್ತು ಪ್ಲೇಯರ್‌ನ ಗಾತ್ರದಂತಹ ಮಾಹಿತಿಯನ್ನು ಸಂಗ್ರಹಿಸಲು, ‘PREF’ ಕುಕೀಯನ್ನು YouTube ಬಳಸುತ್ತದೆ. YouTube Music ನ ಸಂದರ್ಭದಲ್ಲಿ ಈ ಆದ್ಯತೆಗಳು ವಾಲ್ಯೂಮ್, ರಿಪೀಟ್ ಮೋಡ್ ಮತ್ತು ಆಟೋಪ್ಲೇ ಅನ್ನು ಒಳಗೊಂಡಿರುತ್ತವೆ. ಬಳಕೆದಾರರು ಕೊನೆಯದಾಗಿ ಬಳಸಿದ ದಿನಾಂಕದಿಂದ 8 ತಿಂಗಳ ಬಳಿಕ ಈ ಕುಕೀಯ ಅವಧಿ ಮುಗಿಯುತ್ತದೆ. ‘pm_sess’ ಕುಕೀಯು, ನಿಮ್ಮ ಬ್ರೌಸರ್ ಸೆಶನ್ ಅನ್ನು ನಿರ್ವಹಿಸಲು ಸಹ ಸಹಾಯ ಮಾಡುತ್ತದೆ ಹಾಗೂ ಇದು 30 ನಿಮಿಷಗಳವರೆಗೂ ಇರುತ್ತದೆ.
ಕುಕೀಗಳು ಮತ್ತು ಅಂತಹುದೇ ತಂತ್ರಜ್ಞಾನಗಳನ್ನು Google ಸೇವೆಗಳ ಕಾರ್ಯಕ್ಷಮತೆಯನ್ನು ಸುಧಾರಿಸಲು ಕೂಡ ಬಳಸಬಹುದು. ಉದಾಹರಣೆಗೆ, ‘CGIC’ ಕುಕೀ ಬಳಕೆದಾರರ ಆರಂಭಿಕ ಇನ್‌ಪುಟ್ ಅನ್ನು ಆಧರಿಸಿ ಹುಡುಕಾಟದ ಪ್ರಶ್ನೆಗಳನ್ನು ಆಟೋಕಂಪ್ಲೀಟ್ ಮಾಡುವ ಮೂಲಕ ಹುಡುಕಾಟ ಫಲಿತಾಂಶಗಳ ಡೆಲಿವರಿಯನ್ನು ಸುಧಾರಿಸುತ್ತದೆ. ಈ ಕುಕೀ 6 ತಿಂಗಳುಗಳವರೆಗೆ ಇರುತ್ತದೆ.
Google 'SOCS' ಕುಕೀಯನ್ನು ಬಳಸುತ್ತದೆ, ಇದು 13 ತಿಂಗಳವರೆಗೆ ಇರುತ್ತದೆ ಮತ್ತು ಬಳಕೆದಾರರ ಕುಕೀಗಳ ಆದ್ಯತೆಯ ಸ್ಥಿತಿಯನ್ನು ಸಂಗ್ರಹಿಸಲು ಬಳಸಲಾಗುತ್ತದೆ.
ಭದ್ರತೆ
ಭದ್ರತೆಗಾಗಿ ಬಳಸಲ್ಪಡುವ ಕುಕೀಗಳು ಮತ್ತು ಅಂತಹುದೇ ತಂತ್ರಜ್ಞಾನಗಳು ಬಳಕೆದಾರರನ್ನು ದೃಢೀಕರಿಸಲು, ವಂಚನೆಯನ್ನು ತಡೆಗಟ್ಟಲು ಮತ್ತು ನೀವು ಸೇವೆಯ ಜೊತೆ ಸಂವಹನ ನಡೆಸುವಾಗ ನಿಮ್ಮನ್ನು ರಕ್ಷಿಸಲು ನೆರವಾಗುತ್ತವೆ.
ಬಳಕೆದಾರರನ್ನು ದೃಢೀಕರಿಸಲು ಬಳಸಲ್ಪಡುವ ಕುಕೀಗಳು ಮತ್ತು ಅಂತಹುದೇ ತಂತ್ರಜ್ಞಾನಗಳು ಖಾತೆಯ ನಿಜವಾದ ಬಳಕೆದಾರರು ಮಾತ್ರ ಆ ಖಾತೆಯನ್ನು ಆ್ಯಕ್ಸೆಸ್ ಮಾಡಬಹುದು ಎಂಬುದನ್ನು ಖಚಿತಪಡಿಸಿಕೊಳ್ಳಲು ನೆರವಾಗುತ್ತವೆ. ಉದಾಹರಣೆಗೆ, ‘SID’ ಹಾಗೂ ‘HSID’ ಎಂದು ಕರೆಯಲಾಗುವ ಕುಕೀಗಳು, ಬಳಕೆದಾರರ Google ಖಾತೆ ಐಡಿ ಮತ್ತು ತೀರಾ ಇತ್ತೀಚಿನ ಸೈನ್-ಇನ್ ಸಮಯಕ್ಕೆ ಸಂಬಂಧಿಸಿದ ಡಿಜಿಟಲ್ ಸಹಿ ಮಾಡಿರುವ ಹಾಗೂ ಎನ್‌ಕ್ರಿಪ್ಟ್ ಮಾಡಲಾಗಿರುವ ರೆಕಾರ್ಡ್‌ಗಳನ್ನು ಹೊಂದಿರುತ್ತವೆ. ಈ ಕುಕೀಗಳ ಸಂಯೋಜನೆಯು, Google ಸೇವೆಗಳಲ್ಲಿ ಸಲ್ಲಿಸಲಾದ ಫಾರ್ಮ್‌ಗಳ ಕಂಟೆಂಟ್ ಅನ್ನು ಕದಿಯುವಂತಹ ಅನೇಕ ರೀತಿಯ ದಾಳಿಗಳನ್ನು ತಡೆಗಟ್ಟಲು ನಮಗೆ ಅನುವು ಮಾಡಿಕೊಡುತ್ತದೆ.
ಕೆಲವು ಕುಕೀಗಳು ಮತ್ತು ಅಂತಹುದೇ ತಂತ್ರಜ್ಞಾನಗಳನ್ನು ಸ್ಪ್ಯಾಮ್, ವಂಚನೆ ಮತ್ತು ದುರುಪಯೋಗವನ್ನು ಪತ್ತೆಹಚ್ಚಲು ಬಳಸಲಾಗುತ್ತದೆ. ಉದಾಹರಣೆಗೆ, ಬ್ರೌಸಿಂಗ್ ಸೆಶನ್‌ನಲ್ಲಿನ ವಿನಂತಿಗಳನ್ನು ಬಳಕೆದಾರರೇ ಸಲ್ಲಿಸಿದ್ದಾರೆ ಹೊರತು ಇತರ ಸೈಟ್‌ಗಳಲ್ಲ ಎಂಬುದನ್ನು ‘pm_sess’ ಹಾಗೂ ‘YSC’ ಕುಕೀಗಳು ಖಚಿತಪಡಿಸಿಕೊಳ್ಳುತ್ತವೆ. ದುರುದ್ದೇಶಪ್ರೇರಿತ ವೆಬ್‌ಸೈಟ್‌ಗಳು ಬಳಕೆದಾರರಿಗೆ ತಿಳಿಯದೇ ಅವರ ಪರವಾಗಿ ಕಾರ್ಯನಿರ್ವಹಿಸುವುದನ್ನು ಈ ಕುಕೀಗಳು ತಡೆಯುತ್ತವೆ. 'pm_sess' ಕುಕೀಯು 30 ನಿಮಿಷಗಳವರೆಗೆ ಇರುತ್ತದೆ, ಆದರೆ 'YSC' ಕುಕೀಯು ಬಳಕೆದಾರರ ಬ್ರೌಸಿಂಗ್ ಸೆಶನ್‌ನ ಅವಧಿಯವರೆಗೆ ಇರುತ್ತದೆ. ಸ್ಪ್ಯಾಮ್, ವಂಚನೆ ಮತ್ತು ದುರುಪಯೋಗವನ್ನು ಪತ್ತೆಹಚ್ಚಲು, ಅಡ್ವರ್ಟೈಸರ್‌ಗಳಿಗೆ ಆ್ಯಡ್‌ಗಳ ಜೊತೆಗಿನ ಸಂವಾದಗಳಿಗೆ ಮೋಸದ ಅಥವಾ ಅಮಾನ್ಯವಾದ ಇಂಪ್ರೆಷನ್‌ಗಳು ಅಥವಾ ತಪ್ಪಾಗಿ ಶುಲ್ಕ ವಿಧಿಸಲಾಗುವುದಿಲ್ಲ ಮತ್ತು YouTube ಪಾಲುದಾರ ಕಾರ್ಯಕ್ರಮದಲ್ಲಿ YouTube ರಚನೆಕಾರರಿಗೆ ತಕ್ಕಮಟ್ಟಿಗೆ ಸಂಭಾವನೆ ನೀಡಲಾಗುತ್ತದೆ ಎಂಬುದನ್ನು ಖಚಿತಪಡಿಸಿಕೊಳ್ಳುವುದಕ್ಕೆ ಸಹಾಯ ಮಾಡಲು '__Secure-YEC' ಮತ್ತು 'AEC' ಕುಕೀಗಳನ್ನು ಬಳಸಲಾಗುತ್ತದೆ. ‘AEC’ ಕುಕೀ 6 ತಿಂಗಳವರೆಗೆ ಇರುತ್ತದೆ ಮತ್ತು ‘__Secure-YEC’ ಕುಕೀ 13 ತಿಂಗಳವರೆಗೆ ಇರುತ್ತದೆ.
ವಿಶ್ಲೇಷಣೆ
ವಿಶ್ಲೇಷಣೆಗಳಿಗಾಗಿ ಬಳಸಲಾಗುವ ಕುಕೀಗಳು ಮತ್ತು ಅಂತಹುದೇ ತಂತ್ರಜ್ಞಾನಗಳು, ನೀವು ಒಂದು ನಿರ್ದಿಷ್ಟ ಸೇವೆಯ ಜೊತೆಗೆ ಹೇಗೆ ಸಂವಹನ ನಡೆಸುತ್ತೀರಿ ಎನ್ನುವುದನ್ನು ಸೇವೆಗಳು ಅರ್ಥಮಾಡಿಕೊಳ್ಳಲು ನೆರವಾಗುವ ಡೇಟಾವನ್ನು ಸಂಗ್ರಹಿಸಲು ಸಹಾಯ ಮಾಡುತ್ತವೆ. ಸೇವೆಗಳಿಗೆ ಕಂಟೆಂಟ್ ಅನ್ನು ಸುಧಾರಿಸಲು ಮತ್ತು ನಿಮ್ಮ ಅನುಭವವನ್ನು ಹೆಚ್ಚಿಸುವ ಉತ್ತಮ ಫೀಚರ್‌ಗಳನ್ನು ರಚಿಸಲು ಈ ಒಳನೋಟಗಳು ಅನುಮತಿಸುತ್ತವೆ.
ಸಂದರ್ಶಕರು ತಮ್ಮ ಸೇವೆಗಳನ್ನು ಹೇಗೆ ಬಳಸುತ್ತಾರೆ ಎಂಬುದನ್ನು ಅರ್ಥಮಾಡಿಕೊಳ್ಳಲು ಕೆಲವು ಕುಕೀಗಳು ಮತ್ತು ಅಂತಹುದೇ ತಂತ್ರಜ್ಞಾನಗಳು ಸೈಟ್‌ಗಳಿಗೆ ಮತ್ತು ಆ್ಯಪ್‌ಗಳಿಗೆ ಸಹಾಯ ಮಾಡುತ್ತವೆ. ಉದಾಹರಣೆಗೆ, Google Analytics ಸೇವೆಯನ್ನು ಬಳಸುವ ವ್ಯಾಪಾರಗಳ ಪರವಾಗಿ ಮಾಹಿತಿಯನ್ನು ಸಂಗ್ರಹಿಸಲು ಮತ್ತು ಪ್ರತ್ಯೇಕವಾಗಿ ಭೇಟಿ ನೀಡುವ ವ್ಯಕ್ತಿಯನ್ನು ವೈಯಕ್ತಿಕವಾಗಿ ಗುರುತಿಸದೆ ಅವರಿಗೆ ಸೈಟ್ ಬಳಕೆಯ ಅಂಕಿಅಂಶಗಳನ್ನು ವರದಿ ಮಾಡಲು Google Analytics ಕುಕೀಗಳ ಸೆಟ್ ಅನ್ನು ಬಳಸುತ್ತದೆ. "_ga" ಎಂಬುದು Google Analytics ನಿಂದ ಬಳಸಲಾಗುವ ಮುಖ್ಯ ಕುಕೀಯಾಗಿದ್ದು, ಒಬ್ಬ ಸಂದರ್ಶಕನನ್ನು ಇನ್ನೊಬ್ಬರಿಂದ ಪ್ರತ್ಯೇಕಿಸಲು ಸೇವೆಯನ್ನು ಸಕ್ರಿಯಗೊಳಿಸುತ್ತದೆ ಹಾಗೂ ಇದು 2 ವರ್ಷಗಳವರೆಗೆ ಇರುತ್ತದೆ. Google ಸೇವೆಗಳೂ ಸೇರಿದ ಹಾಗೆ, Google Analytics ಅನ್ನು ಕಾರ್ಯಗತಗೊಳಿಸುವ ಯಾವುದೇ ಸೈಟ್, ‘_ga’ ಕುಕೀಯನ್ನು ಬಳಸುತ್ತದೆ. ಪ್ರತಿಯೊಂದು "_ga" ಕುಕೀಯು ನಿರ್ದಿಷ್ಟ ಗುಣಲಕ್ಷಣಕ್ಕೆ ವಿಶಿಷ್ಟವಾಗಿದೆ, ಆದ್ದರಿಂದ ಸಂಬಂಧಿಸದ ವೆಬ್‌ಸೈಟ್‌ಗಳಾದ್ಯಂತ ನೀಡಿದ ಬಳಕೆದಾರರು ಅಥವಾ ಬ್ರೌಸರ್ ಅನ್ನು ಟ್ರ್ಯಾಕ್ ಮಾಡಲು ಬಳಸಲಾಗುವುದಿಲ್ಲ.
Google ಸೇವೆಗಳು, Google Search ನಲ್ಲಿ 'NID' ಮತ್ತು ‘_Secure-ENID’ ಕುಕೀಗಳನ್ನು ಹಾಗೂ ವಿಶ್ಲೇಷಣೆಗಾಗಿ YouTube ನಲ್ಲಿ 'VISITOR_INFO1_LIVE' ಮತ್ತು ‘__Secure-YEC’ ಕುಕೀಗಳನ್ನು ಬಳಸುತ್ತವೆ. Google ಮೊಬೈಲ್ ಆ್ಯಪ್‌ಗಳು ವಿಶ್ಲೇಷಣೆಗಾಗಿ 'Google ಬಳಕೆಯ ID' ಯಂತಹ ಅನನ್ಯವಾಗಿ ಗುರುತಿಸಬಲ್ಲವುಗಳನ್ನು ಸಹ ಬಳಸಬಹುದು.
ಜಾಹೀರಾತು
ಆ್ಯಡ್‌ಗಳನ್ನು ಒದಗಿಸುವುದು ಮತ್ತು ಸಲ್ಲಿಸುವುದು, ಆ್ಯಡ್‌ಗಳನ್ನು ವೈಯಕ್ತೀಕರಿಸುವುದು (myadcenter.google.com ಮತ್ತು adssettings.google.com/partnerads ನಲ್ಲಿನ ನಿಮ್ಮ ಸೆಟ್ಟಿಂಗ್‌ಗಳನ್ನು ಆಧರಿಸಿ), ಬಳಕೆದಾರರಿಗೆ ಎಷ್ಟು ಬಾರಿ ಆ್ಯಡ್ ಅನ್ನು ತೋರಿಸಲಾಗುತ್ತದೆ ಎಂಬುದನ್ನು ಮಿತಿಗೊಳಿಸುವುದು, ನೀವು ಆಯ್ಕೆಮಾಡಿದ ಆ್ಯಡ್‌ಗಳನ್ನು ನೋಡುವುದನ್ನು ನಿಲ್ಲಿಸಲು ಅವುಗಳನ್ನು ಮ್ಯೂಟ್ ಮಾಡುವುದು ಮತ್ತು ಆ್ಯಡ್‌ಗಳ ಪರಿಣಾಮಕಾರಿತ್ವವನ್ನು ಅಳೆಯುವುದು ಸೇರಿದಂತೆ, ಅಡ್ವರ್ಟೈಸಿಂಗ್‌ಗಾಗಿ Google ಕುಕೀಗಳನ್ನು ಬಳಸುತ್ತದೆ.
ಸೈನ್ ಔಟ್ ಮಾಡಿರುವ ಬಳಕೆದಾರರಿಗೆ Google ಸೇವೆಗಳಲ್ಲಿ Google ಆ್ಯಡ್‌ಗಳನ್ನು ತೋರಿಸಲು, ‘NID’ ಕುಕೀಯನ್ನು ಬಳಸಲಾಗುತ್ತದೆ, ಅದೇ ವೇಳೆ Google ಅಲ್ಲದ ಸೈಟ್‌ಗಳಲ್ಲಿ Google ಆ್ಯಡ್‌ಗಳನ್ನು ತೋರಿಸಲು ‘ANID’, ‘IDEʼ ಮತ್ತು ‘id’ ಕುಕೀಗಳನ್ನು ಬಳಸಲಾಗುತ್ತದೆ. Android ನ ಅಡ್ವರ್ಟೈಸಿಂಗ್ ಐಡಿ (AdID) ನಂತಹ ಮೊಬೈಲ್ ಅಡ್ವರ್ಟೈಸಿಂಗ್ ಐಡಿಗಳನ್ನು ನಿಮ್ಮ ಸಾಧನದ ಸೆಟ್ಟಿಂಗ್‌ಗಳನ್ನು ಅವಲಂಬಿಸಿ ಮೊಬೈಲ್ ಆ್ಯಪ್‌ಗಳಲ್ಲಿ ಇಂತಹುದೇ ಉದ್ದೇಶಕ್ಕಾಗಿ ಬಳಸಲಾಗುತ್ತದೆ. ನೀವು ವೈಯಕ್ತೀಕರಿಸಿದ ಆ್ಯಡ್‌ಗಳನ್ನು ಸಕ್ರಿಯಗೊಳಿಸಿದ್ದರೆ, ನೀವು ನೋಡುವ ಆ್ಯಡ್‌ಗಳನ್ನು ವೈಯಕ್ತೀಕರಿಸಲು 'ANID' ಮತ್ತು 'IDE' ಕುಕೀಗಳನ್ನು ಬಳಸಲಾಗುತ್ತದೆ. ನೀವು ವೈಯಕ್ತೀಕರಿಸಿದ ಆ್ಯಡ್‌ಗಳನ್ನು ಆಫ್ ಮಾಡಿದ್ದರೆ, ಈ ಆದ್ಯತೆಯನ್ನು ನೆನಪಿಟ್ಟುಕೊಳ್ಳಲು 'ANID' ಮತ್ತು 'id' ಕುಕೀಗಳನ್ನು ಬಳಸಲಾಗುತ್ತದೆ, ಇದರಿಂದ ನೀವು ವೈಯಕ್ತಿಕಗೊಳಿಸಿದ ಆ್ಯಡ್‌ಗಳನ್ನು ನೋಡುವುದಿಲ್ಲ. ‘NID’ ಕುಕೀಯ ಅವಧಿಯು ಬಳಕೆದಾರರು ಅದನ್ನು ಕೊನೆಯದಾಗಿ ಬಳಸಿ 6 ತಿಂಗಳುಗಳ ನಂತರ ಮುಕ್ತಾಯಗೊಳ್ಳುತ್ತದೆ. 'ANID,' 'IDE,' ಮತ್ತು 'id' ಕುಕೀಗಳು ಯುರೋಪಿಯನ್ ವಾಣಿಜ್ಯ ಪ್ರದೇಶ (EEA), ಸ್ವಿಟ್ಜರ್‌ಲ್ಯಾಂಡ್ ಮತ್ತು ಯುನೈಟೆಡ್ ಕಿಂಗ್‌ಡಮ್ (UK) ನಲ್ಲಿ 13 ತಿಂಗಳುಗಳವರೆಗೆ ಮತ್ತು ಉಳಿದೆಲ್ಲೆಡೆಯೂ 24 ತಿಂಗಳುಗಳವರೆಗೆ ಇರುತ್ತದೆ.
ನಿಮ್ಮ ಜಾಹೀರಾತು ಸೆಟ್ಟಿಂಗ್‌ಗಳನ್ನು ಆಧರಿಸಿ, YouTube ನಂತಹ ಇತರ Google ಸೇವೆಗಳು ಜಾಹೀರಾತುಗಳನ್ನು ತೋರಿಸಲು ಈ ಕುಕೀಗಳು ಮತ್ತು VISITOR_INFO1_LIVE’ ಕುಕೀಯಂತಹ ಇತರ ಕುಕೀಗಳು ಹಾಗೂ ತಂತ್ರಜ್ಞಾನಗಳನ್ನು ಬಳಸಬಹುದು.
ಅಡ್ವರ್ಟೈಸಿಂಗ್‌ಗಾಗಿ ಬಳಸಲ್ಪಡುವ ಕೆಲವು ಕುಕೀಗಳು ಮತ್ತು ಅಂತಹುದೇ ತಂತ್ರಜ್ಞಾನಗಳು Google ಸೇವೆಗಳನ್ನು ಬಳಸಲು ಸೈನ್ ಇನ್ ಮಾಡುವ ಬಳಕೆದಾರರಿಗೆ ಮೀಸಲಾಗಿರುತ್ತವೆ. ಉದಾಹರಣೆಗೆ, Google ಅಲ್ಲದ ಸೈಟ್‌ಗಳಲ್ಲಿ ಸೈನ್ ಇನ್ ಮಾಡಿದ ಬಳಕೆದಾರರನ್ನು ಗುರುತಿಸಲು 'DSID' ಕುಕೀಯನ್ನು ಬಳಸಲಾಗುತ್ತದೆ, ಇದರಿಂದಾಗಿ ಬಳಕೆದಾರರ ಆ್ಯಡ್‌ಗಳ ವೈಯಕ್ತೀಕರಣ ಸೆಟ್ಟಿಂಗ್ ಅನ್ನು ಅದಕ್ಕೆ ಅನುಗುಣವಾಗಿ ಖಚಿತಪಡಿಸಲಾಗುತ್ತದೆ. 'DSID' ಕುಕೀ 2 ವಾರಗಳವರೆಗೆ ಇರುತ್ತದೆ.
Google ನ ಜಾಹೀರಾತು ಪ್ಲ್ಯಾಟ್‌ಫಾರ್ಮ್‌ನ ಮೂಲಕ, ವ್ಯಾಪಾರಗಳು Google ಸೇವೆಗಳಲ್ಲಿ ಮತ್ತು Google ಅಲ್ಲದ ಸೈಟ್‌ಗಳಲ್ಲಿ ಕೂಡ ಜಾಹೀರಾತು ನೀಡಬಹುದು. ಕೆಲವು ಕುಕೀಗಳು ಥರ್ಡ್ ಪಾರ್ಟಿ ಸೈಟ್‌ಗಳಲ್ಲಿ Google ಜಾಹೀರಾತುಗಳನ್ನು ತೋರಿಸುವುದನ್ನು ಬೆಂಬಲಿಸುತ್ತವೆ ಮತ್ತು ನೀವು ಭೇಟಿ ನೀಡುವ ವೆಬ್‌ಸೈಟ್‌ನ ಡೊಮೇನ್‌ನಲ್ಲಿ ಅವುಗಳನ್ನು ಸೆಟ್ ಮಾಡಲಾಗುತ್ತದೆ. ಉದಾಹರಣೆಗೆ, ‘_gads’ ಕುಕೀ Google ಜಾಹೀರಾತುಗಳನ್ನು ತೋರಿಸಲು ಸೈಟ್‌ಗಳನ್ನು ಸಕ್ರಿಯಗೊಳಿಸುತ್ತದೆ. ‘_gac_’ ನಿಂದ ಪ್ರಾರಂಭವಾಗುವ ಕುಕೀಗಳು Google Analytics ಗೆ ಸಂಬಂಧಿಸಿರುತ್ತವೆ ಮತ್ತು ಬಳಕೆದಾರರ ಚಟುವಟಿಕೆ ಮತ್ತು ಅವರ ಜಾಹೀರಾತು ಅಭಿಯಾನಗಳ ಕಾರ್ಯಕ್ಷಮತೆಯನ್ನು ಮೌಲ್ಯಮಾಪನ ಮಾಡಲು ಜಾಹೀರಾತುದಾರರು ಅವುಗಳನ್ನು ಬಳಸುತ್ತಾರೆ. ‘_gads’ ಕುಕೀಗಳು 13 ತಿಂಗಳುಗಳವರೆಗೆ ಇರುತ್ತವೆ ಮತ್ತು ‘_gac_’ ಕುಕೀಗಳು 90 ದಿನಗಳವರೆಗೆ ಇರುತ್ತವೆ.
ಕೆಲವು ಕುಕೀಗಳು ಮತ್ತು ಅಂತಹುದೇ ತಂತ್ರಜ್ಞಾನಗಳನ್ನು, ನೀವು ಭೇಟಿ ನೀಡುವ ಸೈಟ್‌ನಲ್ಲಿನ ಆ್ಯಡ್ ಮತ್ತು ಅಭಿಯಾನದ ಕಾರ್ಯಕ್ಷಮತೆ ಹಾಗೂ Google ಆ್ಯಡ್‌ಗಳಿಗೆ ಸಂಬಂಧಿಸಿದ ಪರಿವರ್ತನೆಯ ದರಗಳನ್ನು ಮೌಲ್ಯಮಾಪನ ಮಾಡಲು ಬಳಸಲಾಗುತ್ತದೆ. ಉದಾಹರಣೆಗೆ, ‘_gcl_’ ನಿಂದ ಪ್ರಾರಂಭವಾಗುವ ಕುಕೀಗಳನ್ನು ಅಡ್ವರ್ಟೈಸರ್‌ನ ಆ್ಯಡ್‌ಗಳನ್ನು ಕ್ಲಿಕ್ ಮಾಡುವ ಬಳಕೆದಾರರು ತಮ್ಮ ಸೈಟ್‌ನಲ್ಲಿ ಎಷ್ಟು ಬಾರಿ ಕ್ರಮ ಕೈಗೊಳ್ಳುತ್ತಾರೆ, ಅಂದರೆ ಖರೀದಿ ಮಾಡುತ್ತಾರೆ ಎಂಬುದನ್ನು ನಿರ್ಧರಿಸಲು ಅಡ್ವರ್ಟೈಸರ್‌ಗೆ ಸಹಾಯ ಮಾಡಲು ಮುಖ್ಯವಾಗಿ ಬಳಸಲಾಗುತ್ತದೆ. ಪರಿವರ್ತನೆ ದರಗಳನ್ನು ಮೌಲ್ಯಮಾಪನ ಮಾಡಲು ಬಳಸುವ ಕುಕೀಗಳನ್ನು ಆ್ಯಡ್‌ಗಳನ್ನು ವೈಯಕ್ತೀಕರಿಸಲು ಬಳಸಲಾಗುವುದಿಲ್ಲ. ‘_gcl_’ ಕುಕೀಗಳು 90 ದಿನಗಳವರೆಗೆ ಇರುತ್ತವೆ. ಆ್ಯಡ್ ಮತ್ತು ಅಭಿಯಾನದ ಕಾರ್ಯಕ್ಷಮತೆಯನ್ನು ಮಾಪನ ಮಾಡಲು Android ಸಾಧನಗಳಲ್ಲಿನ ಅಡ್ವರ್ಟೈಸಿಂಗ್ ಐಡಿಯಂತಹ ಅಂತಹುದೇ ತಂತ್ರಜ್ಞಾನಗಳನ್ನು ಸಹ ಬಳಸಬಹುದು. ನಿಮ್ಮ Android ಸಾಧನದಲ್ಲಿ ನೀವು ನಿಮ್ಮ ಅಡ್ವರ್ಟೈಸರ್ ಐಡಿ ಸೆಟ್ಟಿಂಗ್‌ಗಳನ್ನು ನಿರ್ವಹಿಸಬಹುದು.
ಜಾಹೀರಾತಿಗಾಗಿ ಬಳಸಲ್ಪಡುವ ಕುಕೀಗಳ ಕುರಿತಾದ ಹೆಚ್ಚಿನ ಮಾಹಿತಿಯನ್ನು ಇಲ್ಲಿ ನೋಡಿ.
ವೈಯಕ್ತೀಕರಣ
ವೈಯಕ್ತೀಕರಿಸುವುದಕ್ಕಾಗಿ ಬಳಸಲ್ಪಡುವ ಕುಕೀಗಳು ಮತ್ತು ಅಂತಹುದೇ ತಂತ್ರಜ್ಞಾನಗಳು, g.co/privacytools ನಲ್ಲಿನ ನಿಮ್ಮ ಸೆಟ್ಟಿಂಗ್‌ಗಳು ಅಥವಾ ನಿಮ್ಮ ಆ್ಯಪ್ ಮತ್ತು ಸಾಧನ ಸೆಟ್ಟಿಂಗ್‌ಗಳನ್ನು ಆಧರಿಸಿ ವೈಯಕ್ತಿಕಗೊಳಿಸಿದ ಕಂಟೆಂಟ್ ಮತ್ತು ಫೀಚರ್‌ಗಳನ್ನು ಒದಗಿಸುವ ಮೂಲಕ ನಿಮ್ಮ ಅನುಭವವನ್ನು ಹೆಚ್ಚಿಸುತ್ತವೆ.
ವೈಯಕ್ತೀಕರಿಸಿದ ಕಂಟೆಂಟ್ ಹಾಗೂ ಫೀಚರ್‌ಗಳು ಹೆಚ್ಚು ಸೂಕ್ತವಾದ ಫಲಿತಾಂಶಗಳು ಮತ್ತು ಶಿಫಾರಸುಗಳು, ಕಸ್ಟಮೈಸ್ ಮಾಡಿದ YouTube ಹೋಮ್‌ಪೇಜ್ ಮತ್ತು ನಿಮ್ಮ ಆಸಕ್ತಿಗಳಿಗೆ ಅನುಗುಣವಾಗಿ ವೈಯಕ್ತೀಕರಿಸಿದ ಆ್ಯಡ್‌ಗಳನ್ನು ಒಳಗೊಂಡಿರುತ್ತವೆ. ಉದಾಹರಣೆಗೆ, ‘VISITOR_INFO1_LIVE’ ಕುಕೀ, ಹಿಂದಿನ ವೀಕ್ಷಣೆಗಳು ಮತ್ತು ಹುಡುಕಾಟಗಳನ್ನು ಆಧರಿಸಿ YouTube ನಲ್ಲಿ ವೈಯಕ್ತೀಕರಿಸಿದ ಶಿಫಾರಸುಗಳನ್ನು ಸಕ್ರಿಯಗೊಳಿಸಬಹುದು. ಮತ್ತು ‘NID’ ಕುಕೀ, ನೀವು ಹುಡುಕಾಟ ಪದಗಳನ್ನು ಟೈಪ್ ಮಾಡುತ್ತಿದ್ದಂತೆ Search ನಲ್ಲಿ ವೈಯಕ್ತೀಕರಿಸಿದ ಆಟೋಕಂಪ್ಲೀಟ್ ಫೀಚರ್‌ಗಳನ್ನು ಸಕ್ರಿಯಗೊಳಿಸುತ್ತದೆ. ಈ ಕುಕೀಗಳ ಅವಧಿಯು ಬಳಕೆದಾರರು ಅವುಗಳನ್ನು ಕೊನೆಯದಾಗಿ ಬಳಸಿ 6 ತಿಂಗಳುಗಳ ನಂತರ ಮುಕ್ತಾಯಗೊಳ್ಳುತ್ತದೆ.
‘UULE’ ಎಂಬ ಮತ್ತೊಂದು ಕುಕೀ, ನಿಮ್ಮ ಬ್ರೌಸರ್‌ನಿಂದ Google ನ ಸರ್ವರ್‌ಗಳಿಗೆ ನಿಖರವಾದ ಸ್ಥಳದ ಮಾಹಿತಿಯನ್ನು ಕಳುಹಿಸುತ್ತದೆ, ಇದರಿಂದಾಗಿ ನಿಮ್ಮ ಸ್ಥಳಕ್ಕೆ ಸೂಕ್ತವಾದ ಫಲಿತಾಂಶಗಳನ್ನು ನಿಮಗೆ ತೋರಿಸಲು Google ಗೆ ಸಾಧ್ಯವಾಗುತ್ತದೆ. ಈ ಕುಕೀಯ ಬಳಕೆಯು ಬ್ರೌಸರ್ ಸೆಟ್ಟಿಂಗ್‌ಗಳ ಮೇಲೆ ಮತ್ತು ನೀವು ನಿಮ್ಮ ಬ್ರೌಸರ್‌ನಲ್ಲಿ ಸ್ಥಳವನ್ನು ಆನ್ ಮಾಡುವ ಆಯ್ಕೆಯನ್ನು ಮಾಡಿದ್ದೀರಾ ಎಂಬುದನ್ನು ಅವಲಂಬಿಸಿರುತ್ತದೆ. ‘UULE’ ಕುಕೀ 6 ಗಂಟೆಗಳವರೆಗೆ ಇರುತ್ತದೆ.
ವೈಯಕ್ತೀಕರಣಕ್ಕಾಗಿ ಬಳಸುವ ಕುಕೀಗಳು ಮತ್ತು ಅಂತಹುದೇ ತಂತ್ರಜ್ಞಾನಗಳನ್ನು ನೀವು ತಿರಸ್ಕರಿಸಿದರೂ ಸಹ, ನೀವು ನೋಡುವ ವೈಯಕ್ತೀಕರಿಸದ ಕಂಟೆಂಟ್ ಮತ್ತು ಫೀಚರ್‌ಗಳು ನಿಮ್ಮ ಸ್ಥಳ, ಭಾಷೆ, ಸಾಧನದ ಪ್ರಕಾರ ಅಥವಾ ನೀವು ಪ್ರಸ್ತುತ ವೀಕ್ಷಿಸುತ್ತಿರುವ ಕಂಟೆಂಟ್‌ನಂತಹ ಸಂದರ್ಭೋಚಿತ ಅಂಶಗಳಿಂದ ಪ್ರಭಾವಿತವಾಗಬಹುದು.
ನಿಮ್ಮ ಬ್ರೌಸರ್‌ನಲ್ಲಿ ಕುಕೀಗಳನ್ನು ನಿರ್ವಹಿಸುವಿಕೆ
ನೀವು ಬ್ರೌಸ್ ಮಾಡುವಾಗ ಕುಕೀಗಳನ್ನು ಹೇಗೆ ಸೆಟ್ ಮಾಡಲಾಗಿದೆ ಹಾಗೂ ಬಳಸಲಾಗಿದೆ ಎಂಬುದನ್ನು ನಿರ್ವಹಿಸಲು ಮತ್ತು ಕುಕೀಗಳು ಹಾಗೂ ಬ್ರೌಸಿಂಗ್ ಡೇಟಾವನ್ನು ತೆರವುಗೊಳಿಸಲು ಬಹುತೇಕ ಬ್ರೌಸರ್‌ಗಳು ನಿಮಗೆ ಅನುಮತಿಸುತ್ತವೆ. ಅಷ್ಟೇ ಅಲ್ಲದೆ, ಪ್ರತಿ ಸೈಟ್‌ನ ಆಧಾರದ ಮೇಲೆ ಕುಕೀಗಳನ್ನು ನಿರ್ವಹಿಸಲು ನಿಮಗೆ ಅನುಮತಿಸುವ ಸೆಟ್ಟಿಂಗ್‌ಗಳನ್ನು ನಿಮ್ಮ ಬ್ರೌಸರ್ ಹೊಂದಿರಬಹುದು. ಉದಾಹರಣೆಗೆ, ಅಸ್ತಿತ್ವದಲ್ಲಿರುವ ಕುಕೀಗಳನ್ನು ಅಳಿಸಲು, ಎಲ್ಲಾ ಕುಕೀಗಳನ್ನು ಅನುಮತಿಸಲು ಅಥವಾ ನಿರ್ಬಂಧಿಸಲು ಮತ್ತು ವೆಬ್‌ಸೈಟ್‌ಗಳಿಗೆ ಕುಕೀ ಆದ್ಯತೆಗಳನ್ನು ಸೆಟ್ ಮಾಡಲು chrome://settings/cookies ನಲ್ಲಿರುವ Google Chrome ನ ಸೆಟ್ಟಿಂಗ್‌ಗಳು ನಿಮಗೆ ಅನುಮತಿಸುತ್ತವೆ. Google Chrome, ಅಜ್ಞಾತ ಮೋಡ್ ಅನ್ನು ಸಹ ನೀಡುತ್ತದೆ, ಇದು ನಿಮ್ಮ ಬ್ರೌಸಿಂಗ್ ಇತಿಹಾಸವನ್ನು ಅಳಿಸುತ್ತದೆ ಮತ್ತು ನಿಮ್ಮ ಎಲ್ಲಾ ಅಜ್ಞಾತ ವಿಂಡೋಗಳನ್ನು ನೀವು ಮುಚ್ಚಿದ ನಂತರ ನಿಮ್ಮ ಸಾಧನದಲ್ಲಿನ ಅಜ್ಞಾತ ವಿಂಡೋಗಳಿಂದ ಕುಕೀಗಳನ್ನು ತೆರವುಗೊಳಿಸುತ್ತದೆ.
ನಿಮ್ಮ ಆ್ಯಪ್‌ಗಳು ಮತ್ತು ಸಾಧನಗಳಲ್ಲಿ ಅಂತಹುದೇ ತಂತ್ರಜ್ಞಾನಗಳನ್ನು ನಿರ್ವಹಿಸುವುದು
ಬಹುತೇಕ ಮೊಬೈಲ್ ಸಾಧನಗಳು ಮತ್ತು ಆ್ಯಪ್‌ಗಳು ಸಾಧನವನ್ನು ಗುರುತಿಸಲು ಬಳಸುವ ಆ್ಯಪ್ ಅಥವಾ ಅನನ್ಯವಾಗಿ ಗುರುತಿಸುವಿಕೆಗಳಂತಹ ಅಂತಹುದೇ ತಂತ್ರಜ್ಞಾನಗಳನ್ನು ಹೇಗೆ ಸೆಟ್ ಮಾಡಲಾಗುತ್ತದೆ ಮತ್ತು ಬಳಸಲಾಗುತ್ತದೆ ಎಂಬುದನ್ನು ನಿರ್ವಹಿಸಲು ನಿಮಗೆ ಅನುಮತಿಸುತ್ತದೆ. ಉದಾಹರಣೆಗೆ, Android ಸಾಧನಗಳಲ್ಲಿನ ಅಡ್ವರ್ಟೈಸಿಂಗ್ ಐಡಿ ಅಥವಾ Apple ನ ಅಡ್ವರ್ಟೈಸಿಂಗ್ ಗುರುತಿಸುವಿಕೆಯನ್ನು ನಿಮ್ಮ ಸಾಧನದ ಸೆಟ್ಟಿಂಗ್‌ಗಳಲ್ಲಿ ನಿರ್ವಹಿಸಬಹುದು, ಆದರೆ ಆ್ಯಪ್-ನಿರ್ದಿಷ್ಟ ಗುರುತಿಸುವಿಕೆಗಳನ್ನು ಸಾಮಾನ್ಯವಾಗಿ ಆ್ಯಪ್‌ನ ಸೆಟ್ಟಿಂಗ್‌ಗಳಲ್ಲಿ ನಿರ್ವಹಿಸಬಹುದು.