Android Accessibility Suite ಎಂಬುದು ಅಕ್ಸೆಸಿಬಿಲಿಟಿ ಆ್ಯಪ್‌ಗಳ ಸಂಗ್ರಹಣೆಯಾಗಿದೆ ಹಾಗೂ ಇದು ನಿಮ್ಮ Android ಸಾಧನವನ್ನು ನೋಡದೆಯೇ ಅಥವಾ ಸ್ವಿಚ್ ಅನ್ನು ಬಳಸದೆಯೇ ಸಾಧನವನ್ನು ನಿರ್ವಹಿಸಲು ನಿಮಗೆ ಸಹಾಯ ಮಾಡುತ್ತದೆ.
Android Accessibility Suite ಇವುಗಳನ್ನು ಒಳಗೊಂಡಿರುತ್ತದೆ:
• ಅಕ್ಸೆಸಿಬಿಲಿಟಿ ಮೆನು: ನಿಮ್ಮ ಫೋನ್ ಅನ್ನು ಲಾಕ್ ಮಾಡಲು, ವಾಲ್ಯೂಮ್ ಮತ್ತು ಬ್ರೈಟ್‌ನೆಸ್ ಅನ್ನು ನಿಯಂತ್ರಿಸಲು, ಸ್ಕ್ರೀನ್‌ಶಾಟ್‌ಗಳನ್ನು ತೆಗೆದುಕೊಳ್ಳಲು ಮತ್ತು ಹೆಚ್ಚಿನವನ್ನು ಮಾಡಲು ಈ ದೊಡ್ಡ ಆನ್-ಸ್ಕ್ರೀನ್ ಮೆನು ಬಳಸಿ.
• ಆಯ್ಕೆಮಾಡಿ ಮತ್ತು ಆಲಿಸಿ: ನಿಮ್ಮ ಸ್ಕ್ರೀನ್ ಮೇಲಿನ ಐಟಂಗಳನ್ನು ಆಯ್ಕೆಮಾಡಿ ಹಾಗೂ ಜೋರಾಗಿ ಓದಿ ಹೇಳುವುದನ್ನು ಆಲಿಸಿ.
• TalkBack ಸ್ಕ್ರೀನ್ ರೀಡರ್: ಮಾತಿನ ಪ್ರತಿಕ್ರಿಯೆಯನ್ನು ಪಡೆಯಿರಿ, ನಿಮ್ಮ ಸಾಧನವನ್ನು ಗೆಸ್ಚರ್‌ಗಳ ಮೂಲಕ ನಿಯಂತ್ರಿಸಿ ಮತ್ತು ಆನ್-ಸ್ಕ್ರೀನ್ ಬ್ರೈಲ್ ಕೀಬೋರ್ಡ್ ಬಳಸಿಕೊಂಡು ಟೈಪ್ ಮಾಡಿ.
ಪ್ರಾರಂಭಿಸಲು:
1. ನಿಮ್ಮ ಸಾಧನದ ಸೆಟ್ಟಿಂಗ್‌ಗಳ ಆ್ಯಪ್ ಅನ್ನು ತೆರೆಯಿರಿ.
2. ಅಕ್ಸೆಸಿಬಿಲಿಟಿ ಆಯ್ಕೆಮಾಡಿ.
3. ಅಕ್ಸೆಸಿಬಿಲಿಟಿ ಮೆನು, ಆಯ್ಕೆಮಾಡಿ ಮತ್ತು ಆಲಿಸಿ, ಅಥವಾ TalkBack ಅನ್ನು ಆಯ್ಕೆಮಾಡಿ.
Android Accessibility Suite ಗೆ Android 6 (Android M) ಅಥವಾ ನಂತರದ ಆವೃತ್ತಿಗಳ ಅಗತ್ಯವಿದೆ. Wear ಗಾಗಿ TalkBack ಅನ್ನು ಬಳಸಲು, ನಿಮಗೆ Wear OS 3.0 ಅಥವಾ ನಂತರದ ಆವೃತ್ತಿಯ ಅಗತ್ಯವಿದೆ.
ಅನುಮತಿಗಳ ಸೂಚನೆ
• ಫೋನ್: Android Accessibility Suite ಫೋನ್ ಸ್ಥಿತಿಯನ್ನು ಗಮನಿಸುತ್ತದೆ ಹಾಗಾಗಿ ಅದು ನಿಮ್ಮ ಕರೆಯ ಸ್ಥಿತಿಗೆ ಪ್ರಕಟಣೆಗಳನ್ನು ಅಳವಡಿಸಬಹುದು.
• ಅಕ್ಸೆಸಿಬಿಲಿಟಿ ಸೇವೆ: ಈ ಆ್ಯಪ್ ಅಕ್ಸೆಸಿಬಿಲಿಟಿ ಸೇವೆಯಾಗಿರುವುದರಿಂದ, ಇದು ನಿಮ್ಮ ಕ್ರಿಯೆಗಳನ್ನು ಗಮನಿಸುತ್ತದೆ, ವಿಂಡೋದಲ್ಲಿ ಕಾಣಿಸುವ ವಿಷಯವನ್ನು ಪಡೆದುಕೊಳ್ಳುತ್ತದೆ ಮತ್ತು ನೀವು ಟೈಪ್ ಮಾಡಿದ ಪಠ್ಯವನ್ನು ಗಮನಿಸುತ್ತದೆ.
• ನೋಟಿಫಿಕೇಶನ್‌ಗಳು: ನೀವು ಈ ಅನುಮತಿಯನ್ನು ನೀಡಿದಾಗ, ಅಪ್‌ಡೇಟ್‌ಗಳ ಕುರಿತು TalkBack ನಿಮಗೆ ಸೂಚಿಸಬಹುದು.
ಅಪ್‌ಡೇಟ್ ದಿನಾಂಕ
ನವೆಂ 18, 2024