Google Chrome ವೇಗವಾದ, ಬಳಸಲು ಸುಲಭವಾದ ಮತ್ತು ಸುರಕ್ಷಿತವಾದ ವೆಬ್ ಬ್ರೌಸರ್ ಆಗಿದೆ. Android ಗಾಗಿ ವಿನ್ಯಾಸಗೊಳಿಸಲಾಗಿರುವ Chrome ನಿಮಗಾಗಿ ವೈಯಕ್ತೀಕರಿಸಿದ ಸುದ್ದಿ ಲೇಖನಗಳು, ನಿಮ್ಮ ಮೆಚ್ಚಿನ ಸೈಟ್ಗಳಿಗೆ ತ್ವರಿತ ಲಿಂಕ್ಗಳು, ಡೌನ್ಲೋಡ್ಗಳನ್ನು ಒದಗಿಸುತ್ತದೆ ಮತ್ತು Google ಹುಡುಕಾಟ ಹಾಗೂ Google ಅನುವಾದ ಇದರಲ್ಲಿ ಅಂತರ್ನಿರ್ಮಿತವಾಗಿವೆ. ನಿಮ್ಮ ಎಲ್ಲಾ ಸಾಧನಗಳಾದ್ಯಂತ ನಿಮಗೆ ಇಷ್ಟವಾದ Chrome ವೆಬ್ ಬ್ರೌಸರ್ ಅನ್ನು ಆನಂದಿಸಲು ಈಗಲೇ ಡೌನ್ಲೋಡ್ ಮಾಡಿ.
ತ್ವರಿತವಾಗಿ ಬ್ರೌಸ್ ಮಾಡಿ ಮತ್ತು ಕಡಿಮೆ ಟೈಪ್ ಮಾಡಿ. ನೀವು ಟೈಪ್ ಮಾಡಿದಂತೆಲ್ಲಾ, ತತ್ಕ್ಷಣ ಕಾಣಿಸಿಕೊಳ್ಳುವ, ವೈಯಕ್ತೀಕರಿಸಿದ ಹುಡುಕಾಟ ಫಲಿತಾಂಶಗಳಿಂದ ನಿಮಗೆ ಬೇಕಾದುದನ್ನು ಆರಿಸಿ ಮತ್ತು ಈ ಹಿಂದೆ ಭೇಟಿ ನೀಡಿದ ವೆಬ್ ಪುಟಗಳನ್ನು ತ್ವರಿತವಾಗಿ ಬ್ರೌಸ್ ಮಾಡಿ. ಸ್ವಯಂ ಭರ್ತಿ ವೈಶಿಷ್ಟ್ಯದ ಮೂಲಕ ಫಾರ್ಮ್ಗಳನ್ನು ವೇಗವಾಗಿ ಭರ್ತಿ ಮಾಡಿ.
ಅದೃಶ್ಯ ಬ್ರೌಸಿಂಗ್. ನಿಮ್ಮ ಇತಿಹಾಸವನ್ನು ಉಳಿಸದೆ ಇಂಟರ್ನೆಟ್ ಬ್ರೌಸ್ ಮಾಡಲು ಅದೃಶ್ಯ ಮೋಡ್ ಬಳಸಿ. ನಿಮ್ಮ ಎಲ್ಲಾ ಸಾಧನಗಳಾದ್ಯಂತ ಖಾಸಗಿಯಾಗಿ ಬ್ರೌಸ್ ಮಾಡಿ.
ಸಾಧನಗಳಾದ್ಯಂತ Chrome ಅನ್ನು ಸಿಂಕ್ ಮಾಡಿ. ನೀವು Chrome ಗೆ ಸೈನ್ ಇನ್ ಮಾಡಿದಾಗ, ನಿಮ್ಮ ಬುಕ್ಮಾರ್ಕ್ಗಳು, ಪಾಸ್ವರ್ಡ್ಗಳು ಮತ್ತು ಸೆಟ್ಟಿಂಗ್ಗಳನ್ನು ನಿಮ್ಮ ಎಲ್ಲಾ ಸಾಧನಗಳಾದ್ಯಂತ ಸ್ವಯಂಚಾಲಿತವಾಗಿ ಸಿಂಕ್ ಮಾಡಲಾಗುತ್ತದೆ. ನಿಮ್ಮ ಎಲ್ಲಾ ಮಾಹಿತಿಯನ್ನು ನಿಮ್ಮ ಫೋನ್, ಟ್ಯಾಬ್ಲೆಟ್ ಅಥವಾ ಲ್ಯಾಪ್ಟಾಪ್ನಿಂದ ಯಾವುದೇ ಅಡೆತಡೆಗಳಿಲ್ಲದೆಯೇ ಪ್ರವೇಶಿಸಬಹುದು.
ನಿಮ್ಮ ಎಲ್ಲಾ ಮೆಚ್ಚಿನ ವಿಷಯಗಳು, ಒಂದು ಟ್ಯಾಪ್ನ ಅಂತರದಲ್ಲಿವೆ. Chrome, ಕೇವಲ Google ಹುಡುಕಾಟವನ್ನು ವೇಗಗೊಳಿಸುವುದಷ್ಟೇ ಅಲ್ಲ, ನಿಮ್ಮ ಎಲ್ಲಾ ಮೆಚ್ಚಿನ ವಿಷಯವನ್ನು ನಿಮ್ಮಿಂದ ಒಂದು ಟ್ಯಾಪ್ನ ಅಂತರದಲ್ಲಿರುವಂತೆ ಅದನ್ನು ವಿನ್ಯಾಸಗೊಳಿಸಲಾಗಿದೆ. ಹೊಸ ಟ್ಯಾಬ್ ಪುಟದಿಂದ ನೇರವಾಗಿ ನಿಮ್ಮ ಮೆಚ್ಚಿನ ಸುದ್ದಿ ಸೈಟ್ಗಳು ಅಥವಾ ಸಾಮಾಜಿಕ ಮಾಧ್ಯಮವನ್ನು ನೀವು ಟ್ಯಾಪ್ ಮಾಡಬಹುದು. Chrome ನಲ್ಲಿ ಹೆಚ್ಚಿನ ವೆಬ್ ಪುಟಗಳಲ್ಲಿ “ಹುಡುಕಲು ಟ್ಯಾಪ್ ಮಾಡಿ” ವೈಶಿಷ್ಟ್ಯ ಲಭ್ಯವಿದೆ. ನೀವು ಒಂದು ಪುಟವನ್ನು ವೀಕ್ಷಿಸುತ್ತಿರುವಾಗಲೇ Google ಹುಡುಕಾಟವನ್ನು ಪ್ರಾರಂಭಿಸಲು, ಯಾವುದೇ ಪದ ಅಥವಾ ಪದಗುಚ್ಛವನ್ನು ನೀವು ಟ್ಯಾಪ್ ಮಾಡಬಹುದು.
Google ಸುರಕ್ಷಿತ ಬ್ರೌಸಿಂಗ್ ಮೂಲಕ ನಿಮ್ಮ ಫೋನ್ ಅನ್ನು ಸಂರಕ್ಷಿಸಿ. Chrome ನಲ್ಲಿ Google ಸುರಕ್ಷಿತ ಬ್ರೌಸಿಂಗ್ ಅಂತರ್ನಿರ್ಮಿತವಾಗಿದೆ. ನೀವು ಅಪಾಯಕಾರಿ ಸೈಟ್ಗಳಿಗೆ ನ್ಯಾವಿಗೇಟ್ ಮಾಡಲು ಅಥವಾ ಅಪಾಯಕಾರಿ ಫೈಲ್ಗಳನ್ನು ಡೌನ್ಲೋಡ್ ಮಾಡಲು ಪ್ರಯತ್ನಿಸಿದಾಗ, ನಿಮಗೆ ಎಚ್ಚರಿಕೆ ಸಂದೇಶಗಳನ್ನು ತೋರಿಸುವ ಮೂಲಕ ಅದು ನಿಮ್ಮ ಫೋನ್ ಅನ್ನು ಸುರಕ್ಷಿತವಾಗಿರಿಸುತ್ತದೆ.
ವೇಗವಾಗಿ ಡೌನ್ಲೋಡ್ ಮಾಡಿ ಮತ್ತು ಆಫ್ಲೈನ್ನಲ್ಲಿ ವೆಬ್ ಪುಟಗಳು ಹಾಗೂ ವೀಡಿಯೊಗಳನ್ನು ನೋಡಿ Chrome ನಲ್ಲಿ ಪ್ರತ್ಯೇಕ ಡೌನ್ಲೋಡ್ ಬಟನ್ ಇದೆ. ಅದರ ಮೂಲಕ ನೀವು ವೀಡಿಯೊಗಳು, ಚಿತ್ರಗಳು ಮತ್ತು ಸಂಪೂರ್ಣ ವೆಬ್ ಪುಟಗಳನ್ನು ಒಂದೇ ಟ್ಯಾಪ್ನ ಮೂಲಕ ಸುಲಭವಾಗಿ ಡೌನ್ಲೋಡ್ ಮಾಡಬಹುದು. Chrome ನಲ್ಲಿ ಡೌನ್ಲೋಡ್ಗಳ ಮುಖಪುಟವೂ ಇದೆ. ನೀವು ಡೌನ್ಲೋಡ್ ಮಾಡಿದ ವಿಷಯವನ್ನು, ಆಫ್ಲೈನ್ನಲ್ಲಿರುವಾಗಲೂ ನೀವು ಇಲ್ಲಿ ಪ್ರವೇಶಿಸಬಹುದು.
Google ಧ್ವನಿ ಹುಡುಕಾಟ. ನೀವು ನಿಜವಾಗಿಯೂ ಸಂಭಾಷಣೆ ನಡೆಸಬಹುದಾದ ವೆಬ್ ಬ್ರೌಸರ್ ಅನ್ನು Chrome ನಿಮಗೆ ಒದಗಿಸುತ್ತದೆ. ನೀವು ಪ್ರಯಾಣಿಸುತ್ತಿರುವಾಗ, ಟೈಪ್ ಮಾಡದೆಯೇ ಮತ್ತು ಕೈಗಳನ್ನು ಬಳಸದೆಯೇ ಉತ್ತರಗಳನ್ನು ಪಡೆಯಲು ನಿಮ್ಮ ಧ್ವನಿಯನ್ನು ಬಳಸಿ. ನಿಮ್ಮ ಧ್ವನಿಯ ಮೂಲಕ ನೀವು ಯಾವಾಗ ಬೇಕಾದರೂ, ಎಲ್ಲಿಯಾದರೂ ವೇಗವಾಗಿ ಬ್ರೌಸ್ ಮಾಡಬಹುದು ಮತ್ತು ನ್ಯಾವಿಗೇಟ್ ಮಾಡಬಹುದು.
Google ಅನುವಾದದ ಬಿಲ್ಟ್ ಇನ್: ಸಂಪೂರ್ಣ ವೆಬ್ ಪುಟಗಳನ್ನು ತ್ವರಿತವಾಗಿ ಅನುವಾದಿಸಿ. ಒಂದು ಟ್ಯಾಪ್ನಲ್ಲೇ ಸಂಪೂರ್ಣ ವೆಬ್ ಅನ್ನು ನಿಮ್ಮದೇ ಭಾಷೆಗೆ ಅನುವಾದಿಸಲು ಸಹಾಯವಾಗುವಂತೆ, Chrome ನಲ್ಲಿ Google ಅನುವಾದ ಅಂತರ್ನಿರ್ಮಿತವಾಗಿದೆ.
ವೈಯಕ್ತೀಕರಿಸಿದ ಚತುರ ಶಿಫಾರಸುಗಳು. ನಿಮ್ಮ ಅಭಿರುಚಿಗೆ ಸರಿಹೊಂದುವಂತಹ ಅನುಭವವನ್ನು Chrome ಒದಗಿಸುತ್ತದೆ. ನಿಮ್ಮ ಹಿಂದಿನ ಬ್ರೌಸಿಂಗ್ ಇತಿಹಾಸವನ್ನು ಆಧರಿಸಿ, Chrome ಆಯ್ಕೆ ಮಾಡಿರುವ ಲೇಖನಗಳನ್ನು ನೀವು ಹೊಸ ಟ್ಯಾಬ್ ಪುಟದಲ್ಲಿ ನೀವು ಕಾಣುವಿರಿ.
ಅಪ್ಡೇಟ್ ದಿನಾಂಕ
ನವೆಂ 21, 2024